ಭೋಪಾಲ್-ದಿಲ್ಲಿ ವಂದೇ ಭಾರತ್ ರೈಲಿನಲ್ಲಿ ಬೆಂಕಿ, ಪ್ರಯಾಣಿಕರು ಸುರಕ್ಷಿತ

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಂಸತ್ತಿಗೆ ನೀಡಿದ ಉತ್ತರದ ಪ್ರಕಾರ, ಕಳೆದ ವರ್ಷ ಜೂನ್ ಹಾಗೂ ಡಿಸೆಂಬರ್ ನಡುವೆ ವಂದೇ ಭಾರತ್ ರೈಲುಗಳು-ಪ್ರಾಣಿಗಳ ಘರ್ಷಣೆಯ 68 ಪ್ರಕರಣಗಳು ವರದಿಯಾಗಿದೆ.;

Update: 2023-07-17 10:31 IST
ಭೋಪಾಲ್-ದಿಲ್ಲಿ ವಂದೇ ಭಾರತ್ ರೈಲಿನಲ್ಲಿ ಬೆಂಕಿ, ಪ್ರಯಾಣಿಕರು ಸುರಕ್ಷಿತ
  • whatsapp icon

ಹೊಸದಿಲ್ಲಿ: ಭೋಪಾಲ್-ದಿಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ನ ಒಂದು ಕೋಚ್ ನಲ್ಲಿನ ಬ್ಯಾಟರಿ ಬಾಕ್ಸ್ ನಲ್ಲಿ ಇಂದು ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದು, ಯಾವುದೇ ಗಾಯವಾದ ಬಗ್ಗೆ ವರದಿಯಾಗಿಲ್ಲ.

ಮಧ್ಯಪ್ರದೇಶದ ಕುರ್ವೈ ಕೆಥೋರಾ ನಿಲ್ದಾಣದಲ್ಲಿ ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ರೈಲು ಬೆಳಿಗ್ಗೆ 5.40 ರ ಸುಮಾರಿಗೆ ಭೋಪಾಲ್ ನಿಂದ ಹೊರಟು ದಿಲ್ಲಿಯ ಹಜಝರತ್ ನಿಝಾಮುದ್ದೀನ್ ನಿಲ್ದಾಣವನ್ನು ಮಧ್ಯಾಹ್ನ 1.10 ರ ಸುಮಾರಿಗೆ ತಲುಪುತ್ತದೆ.

ಸ್ಥಳದ ದೃಶ್ಯಗಳಲ್ಲಿ ಚಕ್ರಗಳ ಬಳಿಯಿಂದ ಹೊಗೆ ಹೊರಹೊಮ್ಮುವುದು ಕಂಡುಬಂದಿದೆ. ಅಗ್ನಿಶಾಮಕ ದಳವು ಕ್ಷಿಪ್ರವಾಗಿ ಬೆಂಕಿಯನ್ನು ನಂದಿಸಿತು, ನಂತರ ಸರಿಯಾದ ಪರೀಕ್ಷೆ ಪ್ರಾರಂಭವಾಯಿತು.

ಬೆಂಕಿ, ಬ್ಯಾಟರಿ ಬಾಕ್ಸ್ ಗೆ ಸೀಮಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಾಂತ್ರಿಕ ಪರೀಕ್ಷೆ ಮುಗಿದ ತಕ್ಷಣ ರೈಲು ರಾಷ್ಟ್ರ ರಾಜಧಾನಿಗೆ ತೆರಳಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ‘ವಂದೇ ಭಾರತ್’ರೈಲು ಜಾನುವಾರುಗಳಿಗೆ ಢಿಕ್ಕಿಯಾಗಿ ಸುದ್ದಿಯಾಗಿತ್ತು. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಂಸತ್ತಿಗೆ ನೀಡಿದ ಉತ್ತರದ ಪ್ರಕಾರ, ಕಳೆದ ವರ್ಷ ಜೂನ್ ಹಾಗೂ ಡಿಸೆಂಬರ್ ನಡುವೆ  ವಂದೇ ಭಾರತ್ ರೈಲುಗಳು-ಪ್ರಾಣಿಗಳ ಘರ್ಷಣೆಯ 68 ಪ್ರಕರಣಗಳು ವರದಿಯಾಗಿದೆ.

 ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟದ ಅನೇಕ ಘಟನೆಗಳು ನಡೆದಿವೆ.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News