ನೂಹ್‌: ನೆಲಸಮ ಕಾರ್ಯಾಚರಣೆಗೆ ಹೈಕೋರ್ಟ್‌ ತಡೆ; ಸ್ವಯಂಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಂಡ ನ್ಯಾಯಾಲಯ

Update: 2023-08-07 08:36 GMT
Photo: NDTV

ಹೊಸದಿಲ್ಲಿ: ಇತ್ತೀಚೆಗೆ ತೀವ್ರ ಗಲಭೆಗಳಿಗೆ ಸಾಕ್ಷಿಯಾಗಿದ್ದ ನೂಹ್‌ನಲ್ಲಿ ಅಲ್ಲಿನ ಆಡಳಿತ ಕೈಗೊಂಡ ನೆಲಸಮ ಕಾರ್ಯಾಚರಣೆಗಳ ವಿಚಾರವನ್ನು ಸ್ವಯಂಪ್ರೇರಣೆಯಿಂದ ಕೈಗೆತ್ತಿಕೊಂಡ ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ ಈ ಕಾರ್ಯಾಚರಣೆಗೆ ಇಂದು ತಡೆಯಾಜ್ಞೆ ವಿಧಿಸಿದೆ.

ಹೈಕೋರ್ಟ್‌ ಆದೇಶದ ಬೆನ್ನಲ್ಲೇ ಜಿಲ್ಲಾಧಿಕಾರಿ ಧೀರೇಂದ್ರ ಖಡ್ಗಟಾ ಅವರು ನೆಲಸಮ ಕಾರ್ಯಚಾರಣೆಯನ್ನು ನಿಲ್ಲಿಸಲು ಸಂಬಂಧಿತರಿಗೆ ಸೂಚಿಸಿದ್ದಾರೆ.

ಆರು ಜನರನ್ನು ಬಲಿಪಡೆದ ಗಲಭೆಗಳ ಬೆನ್ನಲ್ಲೇ ಕಳೆದ ನಾಲ್ಕು ದಿನಗಳ ಅವಧಿಯಲ್ಲಿ 350ಕ್ಕೂ ಅಧಿಕ ಗುಡಿಸಲುಗಳು ಹಾಗೂ ಇತರ ಕಟ್ಟಡಗಳನ್ನು ಆಡಳಿತ ನೆಲಸಮಗೊಳಿಸಿರುವುದು ನೂಹ್‌ ಮತ್ತು ಗುರುಗ್ರಾಮದಲ್ಲಿ ವ್ಯಾಪಕ ಆತಂಕಕ್ಕೆ ಕಾರಣವಾಗಿತ್ತು.

ಇದು ಸಾಮಾನ್ಯ ಪ್ರಕ್ರಿಯೆ ಗಲಭೆಗೂ ಇದಕ್ಕೂ ಸಂಬಂಧವಿಲ್ಲ ಎಂದು ಆಡಳಿತ ಹೇಳಿಕೆ ನೀಡಿದ್ದರೂ ಒಂದು ಸಮುದಾಯವನ್ನು ಗುರಿಯಾಗಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬಂದಿತ್ತು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News