ರಾಮ ಮಂದಿರ ಉದ್ಘಾಟನೆ: ಸಾರ್ವಜನಿಕ ರಜೆ ಘೋಷಿಸಿದ ಹಿಮಾಚಲ ಪ್ರದೇಶ ಸರಕಾರ

Update: 2024-01-21 11:32 GMT

Photo: ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸುಖು(PTI)

ಶಿಮ್ಲಾ: ಅಯೋಧ್ಯೆ ರಾಮಮಂದಿರದ  ಮೂರ್ತಿ ‘ಪ್ರಾಣ ಪ್ರತಿಷ್ಠಾಪನೆ’ ಹಿನ್ನಲೆ ನಾಳೆ (ಜ.22) ಹಿಮಾಚಲ ಪ್ರದೇಶ ಸರಕಾರ ಸಾರ್ವಜನಿಕ ರಜೆ ಘೋಷಿಸಿದೆ.

ರಾಜ್ಯದ ಎಲ್ಲ ಸರಕಾರಿ ನೌಕರರು ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ಜ. 22 ರಂದು(ನಾಳೆ) ಎಲ್ಲ ಶಾಲೆಗಳು, ಕಾಲೇಜುಗಳು, ವಿವಿಗಳು ಹಾಗೂ ಸರಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈಗಾಗಲೇ ಹಲವು ರಾಜ್ಯ ಸರಕಾರಗಳು ರಜೆ ನೀಡಿದ್ದು, ಕೇಂದ್ರ ಸರಕಾರ ಅರ್ಧ ದಿನ ಸರಕಾರಿ ಕಚೇರಿಗಳಿಗೆ ರಜೆ ಘೋಷಿಸಿದೆ. ಪ್ರಾಣ ಪ್ರತಿಷ್ಟಾಪನೆ ದಿನದಂದು ಸಾರ್ವಜನಿಕ ರಜೆ ಘೋಷಿಸಿದ ಕಾಂಗ್ರೆಸ್ ನೇತೃತ್ವದ ಮೂರು ರಾಜ್ಯಗಳಲ್ಲಿ ಹಿಮಾಚಲ ಪ್ರದೇಶ ಮೊದಲ ರಾಜ್ಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News