ತಂತ್ರಜ್ಞಾನಗಳಲ್ಲಿ ಭಾರತ 10 ರಿಂದ 15 ವರ್ಷಗಳಷ್ಟು ಹಿಂದುಳಿದಿದೆ ಎಂದ ಡಿಆರ್‌ಡಿಒ ಮುಖ್ಯಸ್ಥ

Update: 2024-09-23 11:20 GMT

ಡಿಆರ್‌ಡಿಒ ಅಧ್ಯಕ್ಷ ಸಮೀರ್ ವಿ ಕಾಮತ್ (Photo: PTI)

ಬೆಂಗಳೂರು: ಸಾಂಪ್ರದಾಯಿಕ ತಂತ್ರಜ್ಞಾನಗಳಲ್ಲಿ ಭಾರತವು 10-15 ವರ್ಷಗಳಷ್ಟು ಹಿಂದುಳಿದಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಧ್ಯಕ್ಷ ಸಮೀರ್ ವಿ ಕಾಮತ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ 15ನೇ ಏರ್ ಚೀಫ್ ಮಾರ್ಷಲ್ ಎಲ್ಎಂ ಖಾತ್ರೆ ನೆನಪಿನ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಮತ್, ಹೆಚ್ಚಿನ ದೇಶಗಳಿಗಿಂತ ಭಾರತವು ತಂತ್ರಜ್ಞಾನದಲ್ಲಿ ಕನಿಷ್ಠ 10-15 ವರ್ಷಗಳಷ್ಟು ಹಿಂದುಳಿದಿದೆ. ನಾವು ಸಾಮರ್ಥ್ಯ ಹೆಚ್ಚಿಸುವ ದೃಷ್ಟಿಯಿಂದ ಗಮನ ಹರಿಸುವ ಅಗತ್ಯವಿದೆ. ನಾವು ವಿಶ್ವದಲ್ಲಿ ಅತಿ ಹೆಚ್ಚು ಇಂಜಿನಿಯರ್ ಗಳನ್ನು ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿದ್ದೇವೆ, ಆದರೆ ನಮ್ಮ ಬಹಳಷ್ಟು ಇಂಜಿನಿಯರ್ ಗಳು ಕೌಶಲ್ಯವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.

ನಾವು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಲ್ಲಿ ನೈಜ ಸಾಮರ್ಥ್ಯವನ್ನು ಬೆಳೆಸಬೇಕು. ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ಉಪಕರಣಗಳನ್ನು ಬಳಸಲು ಅರಿವು ನೀಡಬೇಕು. ನಾವು ನಮ್ಮ ಮೂಲಸೌಕರ್ಯಗಳನ್ನು ನವೀಕರಿಸಬೇಕಾಗಿದೆ ಮತ್ತು ನಮ್ಮ ಪ್ರಾಧ್ಯಾಪಕರಿಗೆ ಹೆಚ್ಚಿನ ವೇತನವನ್ನು ನೀಡಬೇಕಾಗಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News