ಗಡಿ ಭದ್ರತೆಗೆ ದೇಶದಿಂದ ಸಮಗ್ರ ಡ್ರೋನ್ ನಿಗ್ರಹ ಘಟಕ: ಅಮಿತ್ ಶಾ
Update: 2024-12-08 16:40 GMT
ಹೊಸದಿಲ್ಲಿ, ಡಿ. 8: ಗಡಿ ಭದ್ರತೆಗೆ ದೇಶ ಸಮಗ್ರ ಡ್ರೋನ್ ನಿಗ್ರಹ ಘಟಕವನ್ನು ಶೀಘ್ರದಲ್ಲಿ ರೂಪಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರವಿವಾರ ಹೇಳಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ಗಡಿಯಿಂದ ಸುಮಾರು 300 ಕಿ.ಮೀ. ದೂರದಲ್ಲಿರುವ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ತರಬೇತಿ ಶಿಬಿರದಲ್ಲಿ ಪಡೆಯ 60ನೇ ಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ಡ್ರೋನ್‌ಗಳ ಹಾವಳಿ ಹೆಚ್ಚಾಗಲಿದೆ. ನಾವು ರಕ್ಷಣೆ ಹಾಗೂ ಸಂಶೋಧನಾ ಸಂಸ್ಥೆ, ಡಿಆರ್‌ಡಿಒದೊಂದಿಗೆ ಕೈಜೋಡಿಸಿ ಸಂಪೂರ್ಣ ಸರಕಾರದ ವಿಧಾನದೊಂದಿಗೆ ಈ ಸಮಸ್ಯೆಯನ್ನು ನಿಭಾಯಿಸಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಪಾಕಿಸ್ತಾನದೊಂದಿಗಿನ ಭಾರತದ ಗಡಿಯಲ್ಲಿ ಈ ವರ್ಷ 260ಕ್ಕೂ ಅಧಿಕ ಡ್ರೋನ್‌ಗಳು ಬಿದ್ದಿವೆ ಅಥವಾ ಪತ್ತೆಯಾಗಿವೆ. 2023ರಲ್ಲಿ 110 ಡ್ರೋನ್‌ಗಳು ಪತ್ತೆಯಾಗಿದ್ದವು ಎಂದು ಅಧಿಕೃತ ದತ್ತಾಂಶ ತಿಳಿಸಿದೆ.