ಜಮ್ಮು ಹಾಗೂ ಕಾಶ್ಮೀರ | 2ನೇ ಹಂತದ ಮತದಾನಕ್ಕೆ ಸಾಕ್ಷಿಯಾದ 16 ವಿದೇಶಿ ನಿಯೋಗಗಳ ರಾಜತಾಂತ್ರಿಕರು

Update: 2024-09-25 16:10 GMT

PC : PTI

ಶ್ರೀನಗರ : ಕೇಂದ್ರ ಸರಕಾರ ಬುಧವಾರ ಅಮೆರಿಕ, ನಾರ್ವೆ ಹಾಗೂ ಸಿಂಗಪುರ ಸೇರಿದಂತೆ 16 ದೇಶಗಳ ರಾಜತಾಂತ್ರಿಕರನ್ನು ಒಳಗೊಂಡ ನಿಯೋಗವನ್ನು ಜಮ್ಮು ಹಾಗೂ ಕಾಶ್ಮೀರ ವಿಧಾನ ಸಭೆ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಸಾಕ್ಷಿಯಾಗಿರುವ ಬುಡ್ಗಾಂವ್ ಜಿಲ್ಲೆಯ ಓಂಪೋರಾದಲ್ಲಿರುವ ಮತಗಟ್ಟೆಗೆ ಕರೆದೊಯ್ದಿದೆ.

ಈ ಪ್ರವಾಸ ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರಜಾಸತ್ತಾತ್ಮಕ ಪರಿವರ್ತನೆಯನ್ನು ಪ್ರತಿನಿಧಿಸುವ ಪ್ರಯತ್ನದ ಒಂದು ಭಾಗವಾಗಿದೆ.

ಅಮೆರಿಕ, ಮೆಕ್ಸಿಕೊ, ಗಯಾನ, ದಕ್ಷಿಣ ಕೊರಿಯಾ, ಸೋಮಾಲಿಯಾ, ಪನಮಾ, ಸಿಂಗಪುರ, ನೈಝೀರಿಯ, ಸ್ಪೈನ್, ದಕ್ಷಿಣ ಆಫ್ರಿಕಾ, ನಾರ್ವೆ, ತಾಂಝಾನಿಯಾ, ರ್ವಾಂಡಾ, ಅಲ್ಜೀರಿಯಾ ಹಾಗೂ ಪಿಲಿಪ್ಪೈನ್‌ನ ದಿಲ್ಲಿ ಮೂಲದ ನಿಯೋಗಗಳ ರಾಜತಾಂತ್ರಿಕರನ್ನು ಈ ನಿಯೋಗ ಒಳಗೊಂಡಿತ್ತು ಎಂದು ಮೂಲಗಳು ತಿಳಿಸಿವೆ.

ಹೆಚ್ಚಿನ ರಾಜತಾಂತ್ರಿಕರನ್ನು ಅವರ ಉಸ್ತುವಾರಿ ಹಾಗೂ ನಿಯೋಗಗಳ ಉಪ ಮುಖ್ಯಸ್ಥರು ಪ್ರತಿನಿಧಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News