ಕೇರಳ | ದೇವಸ್ಥಾನದ ರಥದ ಚಕ್ರದ ಕೆಳಗೆ ಬಿದ್ದು ಐದು ವರ್ಷದ ಮಗು ಮೃತ್ಯು

Update: 2024-03-25 07:28 GMT

ಕೊಲ್ಲಂ : ಇಲ್ಲಿಗೆ ಸಮೀಪದ ಪ್ರಸಿದ್ಧ ಕೊಟ್ಟನ್‌ಕುಳಂಗರ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವದ ವೇಳೆ ಐದು ವರ್ಷದ ಮಗುವೊಂದು ರಥದ ಚಕ್ರದಡಿ ಸಿಲುಕಿ ರವಿವಾರ ರಾತ್ರಿ ಮೃತಪಟ್ಟ ಘಟನೆ ವರದಿಯಾಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಭಕ್ತರು ಎಳೆಯುವ ರಥದ ದೊಡ್ಡ ಚಕ್ರಗಳ ಅಡಿಯಲ್ಲಿ ಆಕಸ್ಮಿಕವಾಗಿ ಬಿದ್ದು, ಚವರ ನಿವಾಸಿ ದಂಪತಿಯ ಪುತ್ರಿ ಕ್ಷೇತ್ರ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. "ಮಾರ್ಚ್ 24 ರಂದು ರಾತ್ರಿ 11.30 ರ ಸುಮಾರಿಗೆ ಅಪಘಾತ ಸಂಭವಿಸಿದೆ. ಮಗು ತನ್ನ ಹೆತ್ತವರೊಂದಿಗೆ ದೇವಸ್ಥಾನಕ್ಕೆ ಬಂದಿದ್ದಳು" ಎಂದು ಪೊಲೀಸರು ತಿಳಿಸಿದ್ದಾರೆ.

ರಥ ಎಳೆಯುತ್ತಿದ್ದ ಬಯಲಿನಲ್ಲಿ ಈ ಘಟನೆ ನಡೆದಿದೆ. ಮಗುವನ್ನು ಪೋಷಕರು ಪೊಲೀಸರ ಸಹಾಯದೊಂದಿಗೆ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದದರೂ, ಉಳಿಸಿಕೊಳ್ಲಲು ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News