ಲಕ್ಷದ್ವೀಪ | ಮಿನಿಕಾಯ್ ನಲ್ಲಿ ಕಾರ್ಯಾಚರಣೆಯ ವ್ಯಾಪ್ತಿಯನ್ನು ಹಿಗ್ಗಿಸಲಿರುವ ನೌಕಾಪಡೆಯ ನೂತನ ಐಎನ್ಎಸ್ ಜಟಾಯು ನೌಕಾ ನೆಲೆ

Update: 2024-03-06 14:27 GMT

Photo: X \ @indiannavy

ಮಿನಿಕಾಯ್: ವ್ಯೂಹಾತ್ಮಕವಾಗಿ ಅತ್ಯಂತ ಮಹತ್ವದ್ದಾದ ಲಕ್ಷದ್ವೀಪದಲ್ಲಿ ಭಾರತೀಯ ನೌಕಾಪಡೆಯ ಕಾರ್ಯಾಚರಣೆಯ ಸಾಮರ್ಥ್ಯವವನ್ನು ಬಲಪಡಿಸುವಲ್ಲಿ ಮಹತ್ವದ ಬೆಳವಣಿಗೆಯೊಂದು ಬುಧವಾರ ಅನಾವರಣಗೊಂಡಿತು. ಮಿನಿಕಾಯ್ ನಲ್ಲಿ ನೂತನ ನೌಕಾ ನೆಲೆಯನ್ನು ಸ್ಥಾಪಿಸಲಾಗಿದ್ದು, ಅದಕ್ಕೆ ‘ಐಎನ್ಎಸ್ ಜಟಾಯು’ ಎಂದು ನಾಮಕರಣ ಮಾಡಲಾಗಿದೆ.

ಪಾಶ್ಚಿಮಾತ್ಯ ಅರಬ್ಬೀ ಸಮುದ್ರದಲ್ಲಿ ಕಡಲುಗಳ್ಳತನ ನಿಗ್ರಹ ಹಾಗೂ ಮಾದಕ ದ್ರವ್ಯ ನಿಗ್ರಹ ಕಾರ್ಯಾಚರಣೆಯನ್ನು ನಡೆಸುವ ಭಾರತೀಯ ನೌಕಾಪಡೆಯ ಪ್ರಯತ್ನದ ಭಾಗವಾಗಿ ಕಾರ್ಯಾಚರಣೆಯ ವ್ಯಾಪ್ತಿಯನ್ನು ಹಿಗ್ಗಿಸುವ ಬೇರ್ಪಡಬಲ್ಲ ಐಎನ್ಎಸ್ ಜಟಾಯು ನೌಕಾನೆಲೆಯನ್ನು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್. ಹರಿಕುಮಾರ್ ಸ್ಥಾಪಿಸಿದರು.

ಕಮಾಂಡೆಂಟ್ ವ್ರಾತ್ ಬಘೇಲ್ ಅವರ ಅಧೀನದಲ್ಲಿ ಐಎನ್ಎಸ್ ಜಟಾಯುವನ್ನು ಸ್ಥಾಪಿಸಲಾಗಿದೆ.

ಕವರಟ್ಟಿಯಲ್ಲಿ ಐಎನ್ಎಸ್ ದ್ವೀಪ್ ರಕ್ಷಕ್ ನೌಕಾನೆಲೆಯನ್ನು ಸ್ಥಾಪಿಸಿದ ನಂತರ ಲಕ್ಷದ್ವೀಪದಲ್ಲಿ ಸ್ಥಾಪಿಸಲಾಗುತ್ತಿರುವ ಎರಡನೆಯ ನೌಕಾನೆಲೆ ಐಎನ್ಎಸ್ ಜಟಾಯು ಆಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News