ಮತದಾನೋತ್ತರ ಸಮೀಕ್ಷೆಯ ಚರ್ಚೆಗಳಿಂದ ದೂರ ಉಳಿಯಲಿರುವ ಕಾಂಗ್ರೆಸ್

Update: 2024-05-31 15:20 GMT

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಯಾವುದೇ ಸುದ್ದಿ ವಾಹಿನಿಗಳಲ್ಲಿ ನಡೆಯಲಿರುವ ಚುನಾವಣೋತ್ತರ ಸಮೀಕ್ಷೆಯ ಚರ್ಚೆಗಳಿಂದ ದೂರ ಉಳಿಯಲು ನಿರ್ಧರಿಸಿರುವ ಕಾಂಗ್ರೆಸ್, ಟಿಆರ್ಪಿಗಾಗಿ ಊಹಾಪೋಹ ಹಾಗೂ ಕೆಸರೆರಚಾಟದ ಚರ್ಚೆಗಳಲ್ಲಿ ತೊಡಗುವ ಬಯಕೆ ತನಗಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ವಕ್ತಾರ ಪವನ್ ಖೇರಾ, “ಈಗಾಗಲೇ ಮತದಾರರು ತಮ್ಮ ಮತವನ್ನು ಚಲಾಯಿಸಿದ್ದು, ಅವರ ತೀರ್ಪು ಮತಪೆಟ್ಟಿಗೆಗಳಲ್ಲಿ ಭದ್ರವಾಗಿದೆ. ಅದರ ಫಲಿತಾಂಶವು ಜೂನ್ 4ರಂದು ಪ್ರಕಟವಾಗಲಿದೆ. ಅದಕ್ಕೂ ಮುನ್ನವೇ, ಟಿಆರ್ಪಿಗಾಗಿ ಊಹಾಪೋಹ ಹಾಗೂ ಕೆಸರೆರಚಾಟದ ಚರ್ಚೆಗಳಲ್ಲಿ ತೊಡಗಲು ಯಾವುದೇ ಕಾರಣಗಳು ನಮಗೆ ಕಾಣುತ್ತಿಲ್ಲ” ಎಂದು ಬರೆದುಕೊಂಡಿದ್ದಾರೆ.

“ಚುನಾವಣೋತ್ತರ ಸಮೀಕ್ಷೆಯ ಚರ್ಚೆಗಳಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಭಾಗವಹಿಸುವುದಿಲ್ಲ. ಯಾವುದೇ ಚರ್ಚೆಯ ಉದ್ದೇಶ ಮಾಹಿತಿ ನೀಡುವುದಾಗಿರಬೇಕು. ನಾವು ಜೂನ್ 4ರ ನಂತರದ ಚರ್ಚೆಗಳಲ್ಲಿ ಸಂತೋಷವಾಗಿ ಭಾಗವಹಿಸಲಿದ್ದೇವೆ” ಎಂದೂ ಪ್ರಕಟಣೆಯೊಂದರಲ್ಲಿ ಪವನ್ ಖೇರಾ ಸ್ಪಷ್ಟಪಡಿಸಿದ್ದಾರೆ.

ಪಕ್ಷದೊಂದಿಗೆ ಸಮಾಲೋಚನೆ ನಡೆಸಿದ ನಂತರವೇ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News