“ನಮಗೆ ಮತ ನೀಡಿ, ಇಲ್ಲದೇ ಇದ್ದರೆ ನಂತರ ನೋಡಿಕೊಳ್ಳುವೆವು” | ಸಮಾಜವಾದಿ ಪಕ್ಷದ ಶಾಸಕನ ವೀಡಿಯೊ ವೈರಲ್

Update: 2024-04-05 13:40 GMT

Photo : X/@DivyenduRai

ಹೊಸದಿಲ್ಲಿ: ಬುಡೌನ್‌ ಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿ ಶಿವಪಾಲ್‌ ಯಾದವ್‌ ಅವರ ವಿವಾದಾತ್ಮಕ ಹೇಳಿಕೆಯ ವೀಡಿಯೊವೊಂದು ವೈರಲ್‌ ಆಗಿದೆ.

“ನಾವು ಎಲ್ಲರ ಮತಗಳನ್ನು ಕೋರುತ್ತೇವೆ. ನೀವು ನಮಗೆ ಮತ ನೀಡಿದರೆ ಸರಿ, ಇಲ್ಲದೇ ಇದ್ದರೆ, ಆ ವಿಚಾರವನ್ನು ನಂತರ ನೋಡಿಕೊಳ್ಳಲಾಗುವುದು,” ಎಂದು ಅವರು ಹೇಳುತ್ತಿರುವುದು ವೀಡಿಯೊದಲ್ಲಿ ಕೇಳಿಸುತ್ತದೆ.

ಅವರು ಈ ಹೇಳಿಕೆ ನೀಡುವಾಗ ಅವರೊಂದಿಗೆ ಸಮಾಜವಾದಿ ಪಕ್ಷದ ಶಾಸಕ ಸಹಸ್ವನ್‌ ಬೃಜೇಶ್‌ ಯಾದವ್‌ ಮತ್ತು ಶಿವಪಾಲ್‌ ಅವರ ಪುತ್ರ ಕೂಡ ವೇದಿಕೆಯಲ್ಲಿದ್ದರು.

ಶಿವಪಾಲ್‌ ಅವರು ತಮ್ಮ ಈ ವಿವಾದಾತ್ಮಕ ಭಾಷಣ ಎಲ್ಲಿ ಮತ್ತು ಯಾವಾಗ ನೀಡಿದ್ದರೆಂಬುದು ತಿಳಿದು ಬಂದಿಲ್ಲ.

ವೀಡಿಯೊದಲ್ಲಿರುವ ವಿಷಯವನ್ನು ತಿರುಚಲಾಗಿದೆ ಎಂದು ಬೃಜೇಶ್‌ ಯಾದವ್‌ ಹೇಳಿದ್ದಾರೆ.

ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿಯಿಂದ ಈ ವೀಡಿಯೊ ಕುರಿತು ಮಾಹಿತಿ ಕೋರಲಾಗಿದೆ ಎಂದು ಬುಡೌನ್‌ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಮನೋಜ್‌ ಕುಮಾರ್‌ ಹೇಳಿದ್ದಾರೆ. ತನಿಖಾ ವರದಿಯ ಆಧಾರದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಶಿವಪಾಲ್‌ ಯಾದವ್‌ ಅವರು ಸದ್ಯ ಇಟಾವಾ ಜಿಲ್ಲೆಯ ಜಸ್ವಂತನಗರ್‌ ಶಾಸಕರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News