ಮಿಜೋರಾಂ ವಿಧಾನಸಭಾ ಚುನಾವಣೆ: 174 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಐಜ್ವಾಲ್: 40 ಸದಸ್ಯ ಬಲದ ಮಿಜೋರಾಂ ವಿಧಾನಸಭಾ ಚುನಾವಣೆಯು ನ.7ರಂದು ನಡೆಯಲಿದ್ದು, 16 ಮಹಿಳೆಯರು ಸೇರಿದಂತೆ ಒಟ್ಟು 174 ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದರು.
ನಾಮಪತ್ರಗಳ ಸಲ್ಲಿಕೆ ಅವಧಿ ಮುಕ್ತಾಯಗೊಂಡಿದ್ದು, ಅ.23 ನಾಮಪತ್ರಗಳನ್ನು ಹಿಂದೆಗೆದುಕೊಳ್ಳಲು ಅಂತಿಮ ದಿನವಾಗಿದೆ.
ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್),ಪ್ರತಿಪಕ್ಷ ಜೋರಾಂ ಪೀಪಲ್ಸ್ ಮೂವ್‌ಮೆಂಟ್ (ಝಡ್‌ಪಿಎಂ) ಮತ್ತು ಕಾಂಗ್ರೆಸ್ ಎಲ್ಲ 40 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ ಎಂದು ಅಧಿಕಾರಿಗಳು ತಿಳಿಸಿದರು.
ಎಂಎನ್‌ಎಫ್‌ನ 40 ಅಭ್ಯರ್ಥಿಗಳಲ್ಲಿ 25 ಹಾಲಿ ಶಾಸಕರು ಸೇರಿದ್ದರೆ, ಝಡ್‌ಪಿಎಂನ ಆರು ಶಾಸಕರು ಪುನರಾಯ್ಕೆಯನ್ನು ಬಯಸಿದ್ದಾರೆ.
ಬಿಜೆಪಿಯ 23,ಆಪ್‌ನ ನಾಲ್ವರು ಅಭ್ಯರ್ಥಿಗಳೊಂದಿಗೆ 27 ಪಕ್ಷೇತರ ಅಭ್ಯರ್ಥಿಗಳೂ ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಮಿಜೋರಮ್ ವಿಧಾನಸಭೆಗೆ ನ.7ರಂದು ಮತದಾನ ನಡೆಯಲಿದ್ದು,ಡಿ.3ರಂದು ಮತಎಣಿಕೆ ನಡೆಯಲಿದೆ.
ರಾಜ್ಯದಲ್ಲಿ ಒಟ್ಟು 8,56,868 ಅರ್ಹ ಮತದಾರರಿದ್ದು,ಈ ಪೈಕಿ ಶೇ.87ರಷ್ಟು ಕ್ರೈಸ್ತರಾಗಿದ್ದಾರೆ.