ʼಹೆದರುವವನು ಮೋದಿ ಅಲ್ಲʼ: ಕಾಂಗ್ರೆಸ್ ವಿರುದ್ಧ ಛತ್ತೀಸ್‌ಗಢದಲ್ಲಿ ಪ್ರಧಾನಿ ಆಕ್ರೋಶ
ಭ್ರಷ್ಟ ಸರ್ಕಾರವನ್ನು ಭಾರತೀಯ ಜನತಾ ಪಕ್ಷ ಬಿಡುವುದಿಲ್ಲ ಮತ್ತು ನಾನು ಯಾವುದಕ್ಕೂ ಹೆದರುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಛತ್ತೀಸ್‌ಗಢದ ಕಾಂಗ್ರೆಸ್ ಘಟಕದ ಮೇಲೆ ಹೊಸ ವಾಗ್ದಾಳಿ ನಡೆಸಿದರು.
ಹೊಸದಿಲ್ಲಿ: ಕಾಂಗ್ರೆಸ್ ಭ್ರಷ್ಟಾಚಾರದ ಗ್ಯಾರಂಟಿಯಾಗಿದ್ದರೆ, ಭ್ರಷ್ಟಾಚಾರದ ವಿರುದ್ಧ ಕ್ರಮಕ್ಕೆ ನಾನು ಗ್ಯಾರಂಟಿ ಎಂದು ಪ್ರಧಾನಿ ಮೋದಿ ಹೇಳಿದರು. "ಹೆದರುವವನು ಮೋದಿಯಲ್ಲ" ಎಂದೂ ಈ ಸಂದರ್ಭದಲ್ಲಿ ಅವರು ಗುಡುಗಿದರು.
ಭ್ರಷ್ಟ ಸರ್ಕಾರವನ್ನು ಭಾರತೀಯ ಜನತಾ ಪಕ್ಷ ಬಿಡುವುದಿಲ್ಲ ಮತ್ತು ನಾನು ಯಾವುದಕ್ಕೂ ಹೆದರುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಛತ್ತೀಸ್‌ಗಢದ ಕಾಂಗ್ರೆಸ್ ಘಟಕದ ಮೇಲೆ ಹೊಸ ವಾಗ್ದಾಳಿ ನಡೆಸಿದರು.
ಭ್ರಷ್ಟಾಚಾರವನ್ನು ಕಾಂಗ್ರೆಸ್ ಪಕ್ಷದ ದೊಡ್ಡ ಸಿದ್ಧಾಂತವಾಗಿದೆ ಎಂದು ಆರೋಪಿಸಿದ ಪ್ರಧಾನಿ ಮೋದಿ, ಹಳೆಯ ಪಕ್ಷವು ಭ್ರಷ್ಟಾಚಾರದ ಗ್ಯಾರಂಟಿಯಾಗಿದ್ದರೆ ನಾನು ಅದರ ವಿರುದ್ಧದ ಕ್ರಮದ ಗ್ಯಾರಂಟಿ ಎಂದು ಹೇಳಿದರು. ಛತ್ತೀಸಗಡವನ್ನು ಕಾಂಗ್ರೆಸ್ ತನ್ನ ಎಟಿಎಂ ಮಾಡಿಕೊಂಡಿದ್ದು, ಪ್ರತಿಯೊಂದು ಇಲಾಖೆಯೂ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದರು.
“ಕಾಂಗ್ರೆಸ್ ರಾಜ್ಯದಲ್ಲಿ ಮದ್ಯ ನಿಷೇಧದ ಭರವಸೆ ನೀಡಿತ್ತು ಆದರೆ ವಾಸ್ತವದಲ್ಲಿ ಅವರು ಸಾವಿರಾರು ಕೋಟಿ ಹಗರಣಗಳನ್ನು ಮಾಡಿದ್ದಾರೆ. ಹಗರಣದ ಹಣ ಪಕ್ಷದ ಖಾತೆಗೆ ಸೇರಿದೆ. ಈಗ, ಈ ಹಣದ ಜಗಳದಿಂದಾಗಿ ಪಕ್ಷವು 2.5 ವರ್ಷಗಳ ಅಧಿಕಾರ ಹಂಚಿಕೆ ಸೂತ್ರವನ್ನು (ಭೂಪೇಶ್ ಬಘೆಲ್ ಮತ್ತು ಟಿಎಸ್ ಸಿಂಗ್ ದೇವ್ ನಡುವಿನ ಮುಖ್ಯಮಂತ್ರಿ ಸ್ಥಾನದ ಸೀಟು ಹಂಚಿಕೆ ಒಪ್ಪಂದದ ಸುಳಿವು) ಜಾರಿಗೆ ತರಲು ಸಾಧ್ಯವಾಗಲಿಲ್ಲ ಎಂದು ಜನರು ಹೇಳುತ್ತಾರೆ" ಎಂದು ಮೋದಿ ಹೇಳಿದರು.
2019 ರಲ್ಲಿ ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಕಾಂಗ್ರೆಸ್ ಆಡಳಿತದ ರಾಜ್ಯಕ್ಕೆ ಮೋದಿಯವರ ಮೊದಲ ಭೇಟಿ ಇದಾಗಿದೆ. ಛತ್ತೀಸ್‌ಗಢದಲ್ಲಿ ಈ ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.