ಬಾಬರಿ ಮಸೀದಿ ಇದ್ದ ಜಾಗದಲ್ಲಿಯೇ ರಾಮಮಂದಿರ ನಿರ್ಮಾಣವಾಗಿದೆಯೇ?

Update: 2024-01-17 12:09 GMT

Photo: PTI

ಹೊಸದಿಲ್ಲಿ: ಗೂಗಲ್ ಮ್ಯಾಪ್ ಮತ್ತು ಸಟಲ್ಲೈಟ್ ಮ್ಯಾಪ್ ಗಳಲ್ಲಿ ಎರಡು ಬೇರೆ ಬೇರೆ ಪ್ರದೇಶಗಳನ್ನು ಬಾಬರಿ ಮಸೀದಿ ಜಾಗ ಮತ್ತು ರಾಮಮಂದಿರ ಜಾಗ ಎಂದು ತೋರಿಸುತ್ತಿರುವುದು ನಿಜವೇ ಎಂಬ ಬಗ್ಗೆ Fact Check ವೆಬ್ ತಾಣ Alt News ಕೂಲಂಕಷ ಅಧ್ಯಯನ ಮಾಡಿ ಇದು ಸುಳ್ಳು ಸುದ್ದಿ ಎಂದು ಸಾಬೀತು ಮಾಡಿದೆ.

Alt News ಫ್ಯಾಕ್ಟ್ ಚೆಕ್ ನಿಂದ ಕೆಳಗಿನ ಅಂಶಗಳು ಸಾಬೀತಾಗಿವೆ:

1) ರಾಮಮಂದಿರದಿಂದ ಮೂರು ಕಿಮಿ ದೂರದಲ್ಲಿ ಬಾಬರಿ ಮಸೀದಿ ಇದೆ ಎಂದು ಯಾವುದನ್ನು ಆ ವೈರಲ್ ಪೋಸ್ಟ್ ಹೇಳುತ್ತಿದೆಯೋ ಆ ಜಾಗವು ವಾಸ್ತವದಲ್ಲಿ ಬಿರ್ಲಾ ಸೀತಾರಾಮ್ ಮಂದಿರ. ಅದನ್ನು ತಪ್ಪಾಗಿ ಬಾಬರಿ ಮಸೀದಿ ಎಂದು ತೋರಿಸಲಾಗಿದೆ.

2 ) ಹೆಸರೂ ಕೂಡ Babri Masjid ಎಂದಿಲ್ಲದೆ - Babar Masjid ಎಂದಿರುವುದನ್ನು ಇಲ್ಲಿ ಗಮನಿಸಬೇಕು .

3) Google Photo Pro ಆ್ಯಪ್ ಬಳಸಿ ಫೋಟೋಗಳ ಅಧ್ಯಯನ ನಡೆಸಿದಾಗ ನಿರ್ಮಾಣ ಪೂರ್ವದ ಬಾಬರಿ ಮಸೀದಿ ಜಾಗ ಹಾಗೂ ಈಗ ರಾಮಮದಿರ ನಿರ್ಮಾಣ ಆಗುತ್ತಿರುವ ಜಾಗ ಎರಡೂ ಒಂದೇ ಎಂದು ಸಾಬೀತಾಗಿದೆ . ಮತ್ತು ಅದರ ಅಕ್ಷಾಂಶ ಮತ್ತು ರೇಖಾಶ ಎರಡೂ ಒಂದೇ ಆಗಿದೆ - 26°47’43.74″N 82°11’38.77″E

4) 2011 ರ ಗೂಗಲ್ ಫೋಟೋಗಳನ್ನು ಈ ಹಿಂದೆ ಲಭ್ಯವಿರುವ ಬಾಬ್ರಿ ಮಸೀದಿ ಪರಿಸರದ ಫೋಟೋಗಳೊಡನೆ ಹೋಲಿಸಿ ನೋಡಿದಾಗ ಆ ಜಾಗ ಒಂದೇ ಎಂದು ಸಾಬೀತಾಗಿದೆ.


ಆಸಕ್ತರು Alt News ಫ್ಯಾಕ್ಟ್ ಚೆಕ್ ನ ಪೂರ್ಣ ವಿವರಗಳನ್ನು ಈ ವೆಬ್ ವಿಳಾಸದಲ್ಲಿ ಗಮನಿಸಬಹುದು :

https://www.altnews.in/hindi/false-claim-viral-that-construction-of-ram-temple-is-3-km-away-from-babri-masjid/?utm_source=website&utm_medium=social-media&utm_campaign=newpost

ಸಾರಾಂಶದಲ್ಲಿ ಗೂಗಲ್ ಸ್ಯಾಟೆಲೈಟ್ ಇಮೇಜಸ್ ನಲ್ಲಿ ಬಿರ್ಲಾ ಸೀತಾ ರಾಮ್ ಮಂದಿರದ ಜಾಗವನ್ನು ಸಂಬಂಧಪಟ್ಟವರು ಅಥವಾ ಕಿಡಿಗೇಡಿಗಳು ತಪ್ಪಾಗಿ ಬಾಬರ್ ಮಸ್ಜಿದ್ ಎಂದು ದಾಖಲಿಸಿರುವುದರಿಂದ ಗೊಂದಲ ಹುಟ್ಟಿದೆ. ವಿರೋಧ ಪಕ್ಷದ ನಾಯಕರುಗಳು ಅತ್ಯಂತ ಬೇಜವಾಬ್ದಾರಿಯಿಂದ ಅದರ ಸತ್ಯಾಸತ್ಯತೆಯನ್ನು ಗಮನಿಸದೆ ಪ್ರಚಾರ ಮಾಡಿದ್ದಾರೆ. 

- ಶಿವಸುಂದರ್

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ಶಿವಸುಂದರ್

contributor

Similar News