ಬಿಜೆಪಿ ಟಿಕೆಟ್ ನಲ್ಲಿ ಲೋಕಸಭೆಗೆ ಸ್ಪರ್ಧೆ ವದಂತಿ: ಯುವರಾಜ್ ಸಿಂಗ್ ಹೇಳಿದ್ದೇನು?

Update: 2024-03-02 02:24 GMT

Photo:PTI

ಅಮೃತಸರ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗುರುದಾಸ್ ಪುರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನಲ್ಲಿ ಲೋಕಸಭೆಗೆ ಸ್ಪರ್ಧಿಸುವ ಬಗೆಗಿನ ಮಾಧ್ಯಮ ವರದಿಗಳನ್ನು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ತಳ್ಳಿಹಾಕಿದ್ದಾರೆ. ಜನರಿಗೆ ನೆರವು ನೀಡುವುದು ಮತ್ತು ದತ್ತಿ ಕಾರ್ಯಗಳ ಬಗೆಗಿನ ಬದ್ಧತೆಯೇ ತಮ್ಮ ಒಲವು ಎಂದು ಮಾಜಿ ಆಲ್ ರೌಂಡರ್ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮ ವರದಿಗಳನ್ನು ತಳ್ಳಿಹಾಕಿರುವ ಅವರು, "ನಾನು ಗುರುದಾಸ್ ಪುರದಿಂದ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ" ಎಂದು ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.

"ಜನರಿಗೆ ನೆರವಾಗುವುದು ಮತ್ತು ನನ್ನ ವಿವಿಧ ಸಾಮರ್ಥ್ಯಗಳಲ್ಲಿ ಅವರ ಬೆಂಬಲಕ್ಕೆ ನಿಲ್ಲುವುದು ನನ್ನ ಒಲವು. ನನ್ನ ಯೂವಿಕ್ಯಾನ್ ಫೌಂಡೇಷನ್ ಮೂಲಕ ಇದನ್ನು ಮುಂದುವರಿಸುತ್ತೇನೆ. ನಮ್ಮ ಪರಿಪೂರ್ಣ ಸಾಮರ್ಥ್ಯವನ್ನು ಬಳಸಿ ಬದಲಾವಣೆ ತರುವ ಪ್ರಯತ್ನ ಮುಂದುವರಿಸುತ್ತೇನೆ" ಎಂದು ವಿವರಿಸಿದ್ದಾರೆ.

ಯುವರಾಜ್ ಸಿಂಗ್ ಗುರುದಾಸ್ ಪುರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನಲ್ಲಿ ಸ್ಪರ್ಧಿಸುತ್ತಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಕ್ಷೇತ್ರದಲ್ಲಿ ವ್ಯಾಪಕ ವಿರೋಧದ ಹಿನ್ನೆಲೆಯಲ್ಲಿ ಸನ್ನಿ ಡಿಯೋಲ್ ತಮ್ಮ ಕ್ಷೇತ್ರವನ್ನು ತೊರೆಯಲಿದ್ದಾರೆ ಎಂಬ ವದಂತಿ ದಟ್ಟವಾಗಿ ಹಬ್ಬಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News