ಅದಾನಿಗೆ ಸೇರಿದ 5 ಬ್ಯಾಂಕ್ ಖಾತೆಗಳಿಂದ 310 ಮಿಲಿಯನ್ ಡಾಲರ್‌ ಸ್ಥಗಿತಗೊಳಿಸಿದ ಸ್ವಿಸ್ ಅಧಿಕಾರಿಗಳು: ವರದಿ

Update: 2024-09-13 06:31 GMT

ಗೌತಮ್‌ ಅದಾನಿ (Photo: PTI)

ಹೊಸದಿಲ್ಲಿ: ಅದಾನಿ ಗ್ರೂಪ್‌ ನ ಅಕ್ರಮ ಹಣ ವರ್ಗಾವಣೆ ಆರೋಪದ ತನಿಖೆಯ ಭಾಗವಾಗಿ ಸ್ವಿಸ್ ಅಧಿಕಾರಿಗಳು ಅನೇಕ ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿನ 310 ಮಿಲಿಯನ್‌ಗಿಂತಲೂ ಹೆಚ್ಚಿನ ಹಣವನ್ನು ಸ್ಥಗಿತಗೊಳಿಸಿದ್ದಾರೆ ಎಂದು ಹೊಸದಾಗಿ ಬಿಡುಗಡೆಯಾದ ಸ್ವಿಸ್ ಕ್ರಿಮಿನಲ್ ನ್ಯಾಯಾಲಯದ ದಾಖಲೆಗಳನ್ನು ಉಲ್ಲೇಖಿಸಿ ಹಿಂಡೆನ್‌ಬರ್ಗ್ ಗ್ರೂಪ್ ಆರೋಪಿಸಿದೆ.

ಸ್ವಿಸ್ ಕ್ರಿಮಿನಲ್ ನ್ಯಾಯಾಲಯದ ದಾಖಲೆಗಳನ್ನು ಉಲ್ಲೇಖಿಸಿ ಈ ಕುರಿತು ಹಿಂಡೆನ್‌ಬರ್ಗ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಸ್ವಿಸ್ ಅಧಿಕಾರಿಗಳು 2021ರ ಹಿಂದಿನ ಅದಾನಿ ವಿರುದ್ಧದ ಅಕ್ರಮ ಹಣ ವರ್ಗವಾಣೆ ಮತ್ತು ಸೆಕ್ಯುರಿಟೀಸ್ ಫೋರ್ಜರಿ ತನಿಖೆಯ ಭಾಗವಾಗಿ ಅನೇಕ ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿನ 310 ಮಿಲಿಯನ್‌ಗಿಂತಲೂ ಹೆಚ್ಚಿನ ಹಣವನ್ನು ಸ್ಥಗಿತಗೊಳಿಸಿದ್ದಾರೆ ಎಂದು ಹೇಳಿಕೊಂಡಿದೆ.

ಸ್ವಿಸ್ ಮಾಧ್ಯಮ ಮೂಲಗಳು ವರದಿ ಮಾಡಿರುವ ಹೊಸದಾಗಿ ಬಿಡುಗಡೆಯಾದ ಸ್ವಿಸ್ ಕ್ರಿಮಿನಲ್ ಕೋರ್ಟ್ ದಾಖಲೆಗಳಲ್ಲಿ ಅದಾನಿ ಷೇರುಗಳನ್ನು ಹೇಗೆ ಹೂಡಿಕೆ ಮಾಡಿದರು ಎಂಬುದನ್ನು ಪ್ರಾಸಿಕ್ಯೂಟರ್‌ಗಳು ವಿವರಿಸಿದ್ದಾರೆ.

ಈ ಆರೋಪವನ್ನು ಅದಾನಿ ಸಂಸ್ಥೆಯು ತೀವ್ರವಾಗಿ ನಿರಾಕರಿಸಿದೆ. ಪ್ರಸ್ತುತಪಡಿಸಿದ ಆಧಾರ ರಹಿತ ಆರೋಪಗಳನ್ನು ನಾವು ಬಲವಾಗಿ ನಿರಾಕರಿಸುತ್ತೇವೆ. ಅದಾನಿ ಗ್ರೂಪ್ ಯಾವುದೇ ಸ್ವಿಸ್ ನ್ಯಾಯಾಲಯದ ವಿಚಾರಣೆಗೆ ಗುರಿಯಾಗಿಲ್ಲ ಅಥವಾ ನಮ್ಮ ಯಾವುದೇ ಖಾತೆಗಳನ್ನು ಯಾವುದೇ ಪ್ರಾಧಿಕಾರ ಸ್ಥಗಿತಗೊಳಿಸಿಲ್ಲ ಎಂದು ಹೇಳಿಕೊಂಡಿದೆ.

ಬಿಲಿಯನೇರ್ ಗೌತಮ್ ಅದಾನಿಗೆ ಸಂಬಂಧಿಸಿದ 310 ಮಿಲಿಯನ್‌ಗಿಂತಲೂ ಹೆಚ್ಚು ಹಣವನ್ನು ಐದು ಸ್ವಿಸ್ ಬ್ಯಾಂಕ್‌ಗಳಿಂದ ವಶಪಡಿಸಿಕೊಂಡ ಬೆನ್ನಲ್ಲಿ ಸ್ವಿಟ್ಜರ್ಲೆಂಡ್‌ನ ಅಟಾರ್ನಿ ಜನರಲ್ (OAG) ಕಚೇರಿಯು ತನಿಖೆಯನ್ನು ವಹಿಸಿಕೊಂಡಿದೆ ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News