ನದಿಯಲ್ಲಿ ಮುಳುಗುತ್ತಿದ್ದ ನವಜಾತ ಶಿಶುವನ್ನು ರಕ್ಷಿಸಿದ ಬಾಲಕರು

Update: 2023-08-23 17:06 GMT

ಲಕ್ನೋ: ಹೃದಯ ಕಲಕುವ ಘಟನೆಯೊಂದರಲ್ಲಿ ಗೋಮತಿಯ ನಾಲ್ವರು ಬಾಲಕರು ನದಿಯಲ್ಲಿ ಮುಳುಗುತ್ತಿದ್ದ ನವಜಾತ ಶಿಶುವನ್ನು ಜೀವದ ಹಂಗು ತೊರೆದು ರಕ್ಷಿಸಿದ್ದಾರೆ. ಈ ‘ಹೀರೊ’ಗಳ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ತೌಸೀಫ್, ಹಸೀಬ್, ಎಹ್ಸಾನ್ ಮತ್ತು ಗುಫ್ರಾನ್ ಅಪಾಯದಲ್ಲಿದ್ದ ಮಗುವಿನ ಜೀವವನ್ನು ಉಳಿಸುವ ಮೂಲಕ ಅಪ್ರತಿಮ ಶೌರ್ಯ ಮತ್ತು ನಿಸ್ವಾರ್ಥ ಮನೋಭಾವವನ್ನು ಪ್ರದರ್ಶಿಸಿದ್ದಾರೆ. ಈ ಎಲ್ಲ ಮಕ್ಕಳು 8ರಿಂದ 10 ವರ್ಷ ನಡುವಿನ ಪ್ರಾಯದವರಾಗಿದ್ದಾರೆ.

ಈ ನಾಲ್ವರು ಮಕ್ಕಳು ಗೋಮತಿ ನದಿಯ ದಂಡೆಯಲ್ಲಿ ಆಟವಾಡುತ್ತಿದ್ದಾಗ ಕಾರಿನಲ್ಲಿ ಬಂದಿದ್ದ ಮೂವರು ವ್ಯಕ್ತಿಗಳು ನವಜಾತ ಶಿಶುವನ್ನು ನೀರಿಗೆಸೆದು ಪರಾರಿಯಾಗಿದ್ದನ್ನು ಗಮನಿಸಿದ್ದರು. ಎರಡನೇ ಆಲೋಚನೆಯನ್ನೇ ಮಾಡದೆ ನದಿಗೆ ಧುಮುಕಿದ ಮಕ್ಕಳು ಶಿಶುವನ್ನು ರಕ್ಷಿಸುವಲ್ಲಿ ಸಫಲರಾಗಿದ್ದಾರೆ.

ಈ ಬಾಲಕರ ಶೌರ್ಯಗಾಥೆ ಮಿಂಚಿನಂತೆ ಹರಡಿದ್ದು ಸ್ಥಳೀಯ ಸಮುದಾಯ ಮಾತ್ರವಲ್ಲ,ಹೊರಗಿನಿಂದಲೂ ಮೆಚ್ಚುಗೆಗಳು ವ್ಯಕ್ತವಾಗಿವೆ. ಮಕ್ಕಳ ಶೌರ್ಯವನ್ನು ಬಹುವಾಗಿ ಪ್ರಶಂಸಿಸಿರುವ ರಾಜ್ಯಪಾಲರು ಸ್ವತಃ ಅವರನ್ನು ಭೇಟಿಯಾಗಿ ಗೌರವಿಸಿದ್ದಾರೆ.

ತೌಸೀಫ್, ಹಸೀಬ್, ಎಹ್ಸಾನ್ ಮತ್ತು ಗುಫ್ರಾನ್ ಅವರ ಕಾರ್ಯವು ಬಿಕ್ಕಟ್ಟಿನ ಸಮಯದಲ್ಲಿ ಏಕತೆ ಮತ್ತು ಅನುಕಂಪದ ಶಕ್ತಿಯನ್ನು ಉದಾಹರಿಸಿದೆ. ಅವರ ನಿಸ್ವಾರ್ಥ ಕಾರ್ಯವು ಒಂದು ಜೀವವನ್ನು ಉಳಿಸಿದ್ದು ಮಾತ್ರವಲ್ಲ,ಸಂದರ್ಭಗಳನ್ನು ಪರಿಗಣಿಸದೆ ಇತರಿಗೆ ನೆರವಾಗುವುದರ ಮಹತ್ವವನ್ನು ತೋರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News