ನರೇಂದ್ರ ಮೋದಿ ಸ್ಟೇಡಿಯಮ್ ಪಿಚ್ ರಿಪೋರ್ಟ್ ಏನು ಹೇಳುತ್ತದೆ?

Update: 2023-11-18 17:21 GMT

 ನರೇಂದ್ರ ಮೋದಿ ಸ್ಟೇಡಿಯಮ್ | Photo: PTI 

ಅಹಮದಾಬಾದ್ : ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ನರೇಂದ್ರ ಮೋದಿ ಸ್ಟೇಡಿಯಮ್ ಈ ತನಕ 4 ಪಂದ್ಯಗಳ ಆತಿಥ್ಯವಹಿಸಿದೆ. ಈ ಪಿಚ್ ನಲ್ಲಿ ರನ್ ಗಳಿಸಲು ಹೆಚ್ಚು ಅನುಕೂಲಕರವಾಗಿಲ್ಲ. ಆಸ್ಟ್ರೇಲಿಯ ಗಳಿಸಿದ 286 ರನ್ ಗರಿಷ್ಠ ಮೊತ್ತವಾಗಿದೆ. ಈ ಮೊತ್ತವನ್ನು ಇಂಗ್ಲೆಂಡ್ ಚೇಸ್ ಮಾಡಲು ವಿಫಲವಾಗಿ 253 ರನ್ ಗೆ ಆಲೌಟಾಗಿತ್ತು.

ಪ್ರಸಕ್ತ ವಿಶ್ವಕಪ್ ನಲ್ಲಿ ಅಹ್ಮದಾಬಾದ್ ನಲ್ಲಿ 4 ಪಂದ್ಯಗಳಲ್ಲಿ ರನ್ ಚೇಸ್ ಮಾಡಿರುವ ತಂಡ 3 ಬಾರಿ ಜಯ ಸಾಧಿಸಿದೆ. ಈ ಸ್ಟೇಡಿಯಂನಲ್ಲಿ ನಡೆದಿರುವ ಒಟ್ಟು 30 ಪಂದ್ಯಗಳಲ್ಲಿ ಮೊದಲು ಹಾಗೂ 2ನೇ ಬ್ಯಾಟಿಂಗ್ ಮಾಡಿರುವ ತಂಡ ತಲಾ 15 ಪಂದ್ಯಗಳನ್ನು ಜಯಿಸಿವೆ. ಹಿಂದಿನ 10 ಪಂದ್ಯಗಳಲ್ಲಿ 2ನೇ ಬ್ಯಾಟಿಂಗ್ ಮಾಡಿದ್ದ ತಂಡ 6 ಬಾರಿ ಜಯ ಸಾಧಿಸಿದೆ.

ಭಾರತ-ಪಾಕಿಸ್ತಾನ ಮಧ್ಯೆ ಲೀಗ್ ಪಂದ್ಯ ನಡೆದಿರುವ ಕಪ್ಪುಮಣ್ಣಿನ ಪಿಚ್ ನಲ್ಲೇ ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದ್ದು, ವಿಶ್ವಕಪ್ನಲ್ಲಿ ಪಿಚ್ ಈ ತನಕ ಸ್ಪಿನ್ನರ್ ಗಳಿಗೆ ನೆರವಾಗುತ್ತಾ ಬಂದಿದೆ. ಆಸೀಸ್ ಸ್ಪಿನ್ನರ್ ಝಂಪಾ ಇಂಗ್ಲೆಂಡ್ ವಿರುದ್ಧ 21ಕ್ಕೆ 3 ವಿಕೆಟ್ ಪಡೆದರೆ, ಭಾರತದ ಕುಲದೀಪ್ ಯಾದವ್ ಪಾಕ್ ವಿರುದ್ಧ 35ಕ್ಕೆ 2 ವಿಕೆಟ್ ಪಡೆದಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News