ಪಿಐಬಿ ಇರುವಾಗ ಸತ್ಯ ಶೋಧನಾ ಘಟಕವೇಕೆ?: ಕೇಂದ್ರಕ್ಕೆ ಬಾಂಬೆ ಹೈಕೋರ್ಟ್ ಪ್ರಶ್ನೆ
ತಿದ್ದುಪಡಿ ಮಾಡಲಾದ ನಿಯಮಗಳ ಅಗತ್ಯದ ಬಗ್ಗೆ ಸರ್ಕಾರದ ಮೌನವನ್ನು ಪೀಠ ಪ್ರಶ್ನಿಸಿದೆ. ಈ ನಿಯಮಗಳನ್ನು ಪ್ರಶ್ನಿಸಿ ಕಾಮಿಡಿಯನ್ ಕುನಾಲ್ ಕಾಮ್ರಾ, ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ, ನ್ಯೂಸ್ ಬ್ರಾಡ್‌ಕಾಸ್ಟ್ ಎಂಡ್ ಡಿಜಿಟಲ್ ಅಸೋಸಿಯೇಶನ್ ಹಾಗೂ ಅಸೋಸಿಯೇಶನ್ ಆಫ್ ಇಂಡಿಯನ್ ಮ್ಯಾಗಜೀನ್ಸ್ ಪ್ರಶ್ನಿಸಿವೆ.
ಹೊಸದಿಲ್ಲಿ: ದೀರ್ಘ ಸಮಯದಿಂದ ಪ್ರೆಸ್ ಇನ್ಫಾರ್ಮೇಶನ್ ಬ್ಯುರೋ ಇರುವಾಗ ಸತ್ಯ ಶೋಧನಾ ಘಟಕದ ಅಗತ್ಯವೇನಿದೆ ಎಂದು ಸರಕಾರವನ್ನು ಬಾಂಬೆ ಹೈಕೋರ್ಟ್ ಪ್ರಶ್ನಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ʼನಕಲಿ ಸುದ್ದಿಗಳನ್ನುʼ ಪತ್ತೆ ಹಚ್ಚಲು ಹಾಗೂ ಸಂಬಂಧಿತರಿಗೆ ಅದನ್ನು ತೆಗೆದುಹಾಕಲು ಸೂಚಿಸಲು ಸರ್ಕಾರಕ್ಕೆ ಅಧಿಕಾರ ನೀಡುವ ಹೊಸ ಐಟಿ ನಿಯಮಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅಪೀಲುಗಳ ಅಂತಿಮ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಗೌತಮ್ ಎಸ್ ಪಟೇಲ್ ಹಾಗೂ ನೀಲಾ ಕೆ ಗೋಖಲೆ ಅವರ ವಿಭಾಗೀಯ ಪೀಠ ಮೇಲಿನಂತೆ ಹೇಳಿದೆ.
ತಿದ್ದುಪಡಿ ಮಾಡಲಾದ ನಿಯಮಗಳ ಅಗತ್ಯದ ಬಗ್ಗೆ ಸರ್ಕಾರದ ಮೌನವನ್ನು ಪೀಠ ಪ್ರಶ್ನಿಸಿದೆ. ಈ ನಿಯಮಗಳನ್ನು ಪ್ರಶ್ನಿಸಿ ಕಾಮಿಡಿಯನ್ ಕುನಾಲ್ ಕಾಮ್ರಾ, ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ, ನ್ಯೂಸ್ ಬ್ರಾಡ್‌ಕಾಸ್ಟ್ ಎಂಡ್ ಡಿಜಿಟಲ್ ಅಸೋಸಿಯೇಶನ್ ಹಾಗೂ ಅಸೋಸಿಯೇಶನ್ ಆಫ್ ಇಂಡಿಯನ್ ಮ್ಯಾಗಜೀನ್ಸ್ ಪ್ರಶ್ನಿಸಿವೆ.
“ಸತ್ಯ ಶೋಧನಾ ಘಟಕವನ್ನು ಈಗ ಆರಂಭಿಸಲಾಗಿಲ್ಲ ಎಂದು ಅವರು ಹೇಳುತ್ತಿದಾರೆ, ಆದರೆ ಪಿಐಬಿ ಹಿಂದಿನಿಂದಲೂ ಇದೆ. ಅದೇಕೆ ಸಾಕಾಗದು ಮತ್ತು ತಿದ್ದುಪಡಿ ಏಕೆ ಬೇಕು ಎಂಬ ಕುರಿತು ಉತ್ತರಗಳಲ್ಲಿ ನಮಗೆ ಮಾಹಿತಿ ದೊರಕಿಲ್ಲ. ಪಿಐಬಿ ಸ್ಪಷ್ಟನೆ ನೀಡಿದಾಗಲೆಲ್ಲಾ ಪ್ರತಿ ಸುದ್ದಿವಾಹಿನಿ ಹಾಗೂ ದಿನಪತ್ರಿಕೆ ಅದನ್ನು ಪ್ರಕಟಿಸುತ್ತದೆ,” ಎಂದು ನ್ಯಾಯಾಲಯ ಹೇಳಿದೆ.
ಈ ನಿಯಮಗಳಿಂದಾಗಿ 2024 ಸಾರ್ವತ್ರಿಕ ಚುನಾವಣೆಯ ಪ್ರಚಾರ ವೇಳೆ ಉದ್ಭವಿಸಬಹುದಾಧ ಸನ್ನಿವೇಶವನ್ನೂ ನ್ಯಾಯಾಲಯ ಎತ್ತಿದೆ.
“ನಾವು 2024 ರಲ್ಲಿ ಚುನಾವಣೆ ಎದುರಿಸಲಿದ್ದೇವೆ. ಪ್ರಚಾರದ ವೇಳೆ ಜನರು ಹಲವಾರು ವಿಷಯ ಹೇಳುತ್ತಾರೆ. ಯಾವುದೇ ರಾಜಕೀಯ ವ್ಯಕ್ತಿ ನೀಡಿದ್ದ ಹೇಳಿಕೆಯನ್ನು ಆನ್‌ಲೈನ್ ಮೂಲಕ ಒಬ್ಬ ವ್ಯಕ್ತಿ ಪ್ರಶ್ನಿಸಿ ಟೀಕಿಸಿದರೆ ಹಾಗೂ ಸತ್ಯಶೋದನಾ ಘಟಕ ಅದನ್ನು ತೆಗೆದುಹಾಕಬೇಕೆಂದು ಹೇಳಿದರೆ ಅದು ಹೇಗೆ ಸಾಧ್ಯ? ಇದು ಸರ್ಕಾರದ ಕೆಲಸವೇ? ಸರ್ಕಾರದ ಸತ್ಯ ಶೋಧನಾ ಘಟಕ ಅದನ್ನು ಸುಳ್ಳು ಎಂದು ಹೇಳಿ ಅದನ್ನು ತೆಗೆದುಹಾಕಲು ಹೇಳಿದಾಗ ಅದಕ್ಕೆ ಒಪ್ಪದೇ ಇದ್ದರೆ ಅದಕ್ಕೆ ಸಮಸ್ಯೆಯಾಗಬಹುದೇ?” ಎಂದು ನ್ಯಾಯಾಲಯ ಕೇಳಿದೆ.