2024 ರ ಲೋಕಸಭಾ ಚುನಾವಣೆಯಲ್ಲಿ ಸೋಲುವ ಕುರಿತು ಚಿಂತಿತರಾಗಿರುವ ಪ್ರಧಾನಿ ಮೋದಿ ವಿದೇಶದಲ್ಲಿ ನೆಲೆ ಹುಡುಕುತ್ತಿದ್ದಾರೆ: ಲಾಲು ಪ್ರಸಾದ್

Update: 2023-07-31 07:13 GMT

ಹೊಸದಿಲ್ಲಿ: ಮುಂದಿನ ವರ್ಷದ ಲೋಕಸಭೆ ಚುನಾವಣೆಯಲ್ಲಿ ಸೋಲುವ ಕುರಿತಂತೆ ಚಿಂತಿತರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶದಲ್ಲಿ ಆಶ್ರಯವನ್ನು ಹುಡುಕುವತ್ತ ಗಮನಹರಿಸಿದ್ದಾರೆ ಎಂದು ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಲಾಲು ಪ್ರಸಾದ್ ರವಿವಾರ ಟೀಕಿಸಿದ್ದಾರೆ.

ಕೆಲವು ದಿನಗಳ ಹಿಂದೆ ಮೋದಿಯವರು ಭಾರತೀಯ ರಾಷ್ಟ್ರೀಯ ಅಭಿವೃದ್ದಿಶೀಲ ಎಲ್ಲರನ್ನೂ ಒಳಗೊಳ್ಳುವ ಮೈತ್ರಿಕೂಟ INDIA ವನ್ನು "ಕ್ವಿಟ್ ಇಂಡಿಯಾ" ಎಂದು ವ್ಯಂಗ್ಯವಾಡಿರುವ ಕುರಿತು ಲಾಲು ಪ್ರಸಾದ್ ಪ್ರತಿಕ್ರಿಯೆ ಕೇಳಿದಾಗ ಅವರು ಈ ಹೇಳಿಕೆಯನ್ನು ನೀಡಿದರು., ಹೊಸ ಒಕ್ಕೂಟವಾದ "INDIA"ವನ್ನು ರಚಿಸಿರುವ ವಿರೋಧ ಪಕ್ಷಗಳು ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ತುಷ್ಟೀಕರಣದ ರಾಜಕೀಯವನ್ನ ಮಾಡುತ್ತಿವೆ ಎಂದು ಪ್ರಧಾನಿ ಆರೋಪಿಸಿದ್ದರು.

ದೇಶ ಬಿಡುವ ಯೋಜನೆ ಹಾಕಿಕೊಂಡಿರುವ ಮೋದಿ... ಇದೇ ಕಾರಣಕ್ಕಾಗಿ ಹಲವು ದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಅವರುತಮ್ಮ ಮನ ತಣಿಸಲು ಪಿಜ್ಜಾ, ಮೊಮೊಸ್ ಮತ್ತು ಚೌ ಮೇನ್ (ಚೀನಾ ಆಹಾರ) ಅನ್ನುತಿಂದು ಆನಂದಿಸಲು ಸ್ಥಳವನ್ನು ಹುಡುಕುತ್ತಿದ್ದಾರೆ," ಎಂದು ಲಾಲು ವ್ಯಂಗ್ಯವಾಡಿದರು.

ಅನಾರೋಗ್ಯದಿಂದ ಬಳಲುತ್ತಿರುವ ಲಾಲು ಪ್ರಸಾದ್ ಅವರು ತಮ್ಮ ಹಿರಿಯ ಪುತ್ರ ಮತ್ತು ಬಿಹಾರದ ಸಚಿವ ತೇಜ್ ಪ್ರತಾಪ್ ಯಾದವ್ ಆಯೋಜಿಸಿದ್ದ ಸಮಾರಂಭದಲ್ಲಿ ಅಪರೂಪವಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡರು.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News