ಶಾಂಘೈ ಬಿಷಪ್ ನೇಮಕಕ್ಕೆ ಪೋಪ್ ಫ್ರಾನ್ಸಿಸ್ ಅನುಮೋದನೆ
Update: 2023-07-15 17:32 GMT
ವ್ಯಾಟಿಕನ್: ಚೀನಾದ ಶಾಂಘೈ ಪ್ರಾಂತದ ಬಿಷಪ್ ಆಗಿ ಜೋಸೆಫ್ ಶೆನ್‍ಬಿನ್‍ರನ್ನು ನೇಮಕ ಮಾಡಿರುವುದನ್ನು ಪೋಪ್ ಫ್ರಾನ್ಸಿಸ್ ಅನುಮೋದಿಸಿದ್ದಾರೆ. ಆದರೆ ಚೀನಾವು ತನ್ನೊಂದಿಗೆ ಸಮಾಲೋಚಿಸದೆ ಈ ನೇಮಕ ಮಾಡಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವ್ಯಾಟಿಕನ್ ಹೇಳಿದೆ.
ಶಾಂಘೈ ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ಹುದ್ದೆ ಹಲವು ಸಮಯಗಳಿಂದ ಕಾಲಿಯಿತ್ತು. ಈ ಹುದ್ದೆಗೆ ಜಿಯಾಂಗ್ಸು ಪ್ರಾಂತದ ಹೈಮಾನ್ ಧರ್ಮಪ್ರಾಂತದ ಮುಖ್ಯಸ್ಥ ಜೋಸೆಫ್ ಶೆನ್‍ಬಿನ್‍ರನ್ನು ನೇಮಕಗೊಳಿಸಿರುವುದಾಗಿ ಚೀನಾ ಸರಕಾರ ಮಾಹಿತಿ ನೀಡಿದೆ. ಆದರೆ ಬಿಷಪ್ ನೇಮಕಕ್ಕೆ ಸಂಬಂಧಿಸಿ 2018ರಲ್ಲಿ ಸಹಿಹಾಕಲಾದ ಒಪ್ಪಂದವನ್ನು ಈ ನೇಮಕಾತಿ ಉಲ್ಲಂಘಿಸಿದೆ. ಬಿಷಪರ ನೇಮಕಾತಿ ಕುರಿತು ವ್ಯಾಟಿಕನ್ ಜತೆ ಸಮಾಲೋಚನೆ ನಡೆದಿಲ್ಲ ಎಂದು ವ್ಯಾಟಿಕನ್‍ನ ಕಾರ್ಯದರ್ಶಿ ಕಾರ್ಡಿನಲ್ ಪಿಯೆಟ್ರೊ ಪರೋಲಿನ್ ಹೇಳಿಕೆ ನೀಡಿದ್ದಾರೆ.