ದೇವದುರ್ಗ | 6 ಬಾಲ ಕಾರ್ಮಿಕರ ರಕ್ಷಣೆ
Update: 2025-01-28 18:31 IST

ರಾಯಚೂರು : ಮಕ್ಕಳನ್ನು ಶಾಲೆ ಬಿಡಿಸಿ ಕೃಷಿ ಚಟುವಟಿಕೆಗಳಿಗಾಗಿ ಕರೆದೊಯ್ಯುತ್ತಿದ್ದ 2 ಸರಕು ಸಾಗಣೆ ವಾಹನಗಳ ಮೇಲೆ ಜ.28ರಂದು ಹಠಾತ್ ದಾಳಿ ನಡೆಸಿ 6 ಮಕ್ಕಳನ್ನು ರಕ್ಷಿಸಲಾಗಿದೆ.
6 ಮಕ್ಕಳನ್ನು ಪುನಃ ಶಾಲೆಗೆ ಸೇರಿಸಿ, ವಾಹನ ಮಾಲಕರು ಮತ್ತು ಚಾಲಕರ ವಿರುದ್ಧ ಪೊಲೀಸ್ ಇಲಾಖೆ, ಸಾರಿಗೆ ಇಲಾಖೆಯ ಅಧಿಕಾರಿಗಳು ಕ್ರಮವಹಿಸಿದರು.
ಕಾರ್ಯಾಚರಣೆಯಲ್ಲಿ ಅಧಿಕಾರಿಗಳಾದ ಮಂಜುನಾಥ ರೆಡ್ಡಿ, ಮಲ್ಲಪ್ಪ, ನಾರಾಯಣ, ಗೋಪಾಲ, ರಾಜನಗೌಡ, ವೆಂಕಟೇಶ, ಶಶಿಧರ, ನಿಂಗಪ್ಪ ಮಾಲಿ, ಲಿಂಗಣ್ಣ ಜಿ., ಅಶೋಕ್ ಪೂಜಾರಿ, ಮಂಜುಳಾ, ಸೋಮಶೇಖರ ದೊರೆ, ದೇವದುರ್ಗ ಟ್ರಾಫಿಕ್ ಪೊಲೀಸ್ ಠಾಣೆಯ ಸಿಬ್ಬಂದಿ ಚನ್ನಪ್ಪ, ಬಸವರಾಜ ಹಾಗೂ ಅಕೌಂಟಂಟ್ ಹುಸೇನ್ ನಾಯ್ಕ ಪಾಲ್ಗೊಂಡಿದ್ದರು.