ರಾಯಚೂರು | ದ್ವಿತೀಯ ಪಿಯುಸಿ ಪರೀಕ್ಷೆ; 1,169 ವಿದ್ಯಾರ್ಥಿಗಳು ಗೈರು

Update: 2025-03-18 19:19 IST
ರಾಯಚೂರು | ದ್ವಿತೀಯ ಪಿಯುಸಿ ಪರೀಕ್ಷೆ; 1,169 ವಿದ್ಯಾರ್ಥಿಗಳು ಗೈರು

ಸಾಂದರ್ಭಿಕ ಚಿತ್ರ

  • whatsapp icon

ರಾಯಚೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಿಂದ 2025ರ ಮಾ.17ರ ಸೋಮವಾರ ನಡೆದ ದ್ವಿತೀಯ ಪಿಯುಸಿ-01ರ ಸಮಾಜಶಾಸ್ತ್ರ, ಜೀವಶಾಸ್ತ್ರ ಹಾಗೂ ಗಣಕವಿಜ್ಞಾನ ವಿಷಯದ ಪರೀಕ್ಷೆಯಲ್ಲಿ ಒಟ್ಟು 1,169 ವಿದ್ಯಾರ್ಥಿಗಳು ಗೈರು ಹಾಜರಿಯಾಗಿದ್ದಾರೆ.

ಜಿಲ್ಲೆಯ 49 ಕೇಂದ್ರಗಳಲ್ಲಿ ಸಮಾಜಶಾಸ್ತ್ರ, ವಿಷಯದಲ್ಲಿ ಒಟ್ಟು 11,109 ನೋಂದಣೆಯಾಗಿದ್ದು, 10,052 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿಯಾಗಿದ್ದಾರೆ. 1,051 ಜನ ವಿದ್ಯಾರ್ಥಿಗಳು ಗೈರು ಹಾಜರಿಯಾಗಿದ್ದಾರೆ. ಜೀವಶಾಸ್ತ್ರ ವಿಷಯದಲ್ಲಿ ಒಟ್ಟು 4,828 ನೋಂದಣೆಯಾಗಿದ್ದು, 4,737 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿಯಾಗಿದ್ದಾರೆ. 91 ಜನ ವಿದ್ಯಾರ್ಥಿಗಳು ಗೈರು ಹಾಜರಿಯಾಗಿದ್ದಾರೆ.

ಗಣಕವಿಜ್ಞಾನ ವಿಷಯದಲ್ಲಿ ಒಟ್ಟು 1,392 ನೋಂದಣೆಯಾಗಿದ್ದು, 1,357 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿಯಾಗಿದ್ದಾರೆ. 27 ಜನ ವಿದ್ಯಾರ್ಥಿಗಳು ಗೈರು ಹಾಜರಿಯಾಗಿದ್ದಾರೆ ಎಂದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News