ಸಾಲಿಡಾರಿಟಿ ಯೂತ್ ಮೂವ್ಮೆಂಟ್; ಸಿಂಧನೂರು ತಾಲೂಕು ಅಧ್ಯಕ್ಷರಾಗಿ ಅಬುಲೈಸ್ ನಾಯ್ಕ್
Update: 2025-03-20 10:48 IST

ಅಬುಲೈಸ್ ನಾಯ್ಕ್
ರಾಯಚೂರು:ಸಾಲಿಡಾರಿಟಿ ಯೂತ್ ಮೂವ್ಮೆಂಟ್ (SYM) ಸಿಂಧನೂರು ತಾಲೂಕು ಘಟಕಕ್ಕೆ ಪದಾಧಿಕಾರಿಗಳ ಚುನಾವಣೆ ನಡೆದಿದ್ದು ತಾಲೂಕು ಅಧ್ಯಕ್ಷರಾಗಿ ಅಬುಲೈಸ್ ನಾಯ್ಕ್, ಉಪದ್ಯಕ್ಷರಾಗಿ ಇಸ್ಮಾಯಿಲ್, ಕಾರ್ಯದರ್ಶಿಯಾಗಿ ನಯೀಮ್ ಇರ್ಫಾನ್ ಅವರು ಆಯ್ಕೆಯಾಗಿದ್ದಾರೆ.
ಎಸ್ ವೈಎಂ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವಸೀಮ್ ಅವರ ನೇತೃತ್ವದಲ್ಲಿ ಬುಧವಾರ ಸಿಂಧನೂರು ಘಟಕದ ಚುನಾವಣೆಗಳು ಪೂರ್ಣಗೊಂಡಿದ್ದು ಎರಡು ವರ್ಷಗಳ ಅವಧಿಗೆ ಹೊಸದಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಪ್ರಧಾನ ಕಾರ್ಯದರ್ಶಿಯಾಗಿ ಸಬೀರ್ ತುರಕಟ್ಟಿ, ಜೊತೆ ಕಾರ್ಯದರ್ಶಿಯಾಗಿ ಶೋಯೆಬ್ ಖಾದ್ರಿ, ಖಜಾಂಚಿಯಾಗಿ ಸನಾವುಲ್ಲಾ ಖಾನ್ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಘಟಕದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.