ಸಿರವಾರ ತಾಲೂಕು ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಜಾಹೀದ್ ಪಾಷಾ ಆಯ್ಕೆ
Update: 2025-03-22 20:06 IST

ಸಿರವಾರ : ಸಿರವಾರ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ತಾಲೂಕು ಅಧ್ಯಕ್ಷರಾಗಿ ಜಾಹೀದ್ ಪಾಷಾ ಇವರನ್ನು ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ಜಿಲ್ಲಾಧ್ಯಕ್ಷರು ಘೋಷಿಸಿದ್ದಾರೆ.
ಸಿರವಾರ ಪ್ರವಾಸಿ ಮಂದಿರದಲ್ಲಿ ಜರುಗಿದ ಸಭೆಯಲ್ಲಿ ರಾಜ್ಯ ಸಂಘದ ಆದೇಶದ ಮೇರೆಗೆ ಸಿರವಾರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನೆಯ ಹಿತದೃಷ್ಟಿಯಿಂದ ತಾಲೂಕು ಅಡ್ಯಕ್ ಸಮಿತಿಯನ್ನು ರಚಿಸಿ ಸಿರವಾರ ತಾಲೂಕು ಅಧ್ಯಕ್ಷರನ್ನಾಗಿ ಜಾಹೀದ್ ಪಾಷಾ, ಪ್ರಧಾನ ಕಾರ್ಯದರ್ಶಿಯಾಗಿ ರಾಘವೇಂದ್ರ, ಮಹಿಳಾ ಉಪಾಧ್ಯಕ್ಷರಾಗಿ ನಿರ್ಮಲಾ, ಇನ್ನೋರ್ವ ಉಪಾಧ್ಯಕ್ಷರಾಗಿ ಪವನ್ ಕುಮಾರ, ಖಜಾಂಚಿಯಾಗಿ ಬಸವರಾಜ ಕಲ್ಮಾಲ ಇವರುಗಳನ್ನು ತಾಲೂಕು ಪದಾಧಿಕಾರಿಗಳನ್ನಾಗಿ ಸಂಘದ ಬೈಲಾ ನಿಯಮಗಳು ಹಾಗೂ ರಾಜ್ಯ ಸಂಘದ ನಿರ್ದೇಶನದಂತೆ ಕಾರ್ಯನಿರ್ವಹಿಸಲು ಆದೇಶ ಪತ್ರದ ಮೂಲಕ ಪ್ರಕಟಿಸಲಾಗಿದೆ.