ರಾಯಚೂರು | ಡಾ.ಸಿದ್ಧಲಿಂಗಯ್ಯನವರ ಬದುಕು ಬರಹ ಕುರಿತು ವಿಚಾರ ಸಂಕಿರಣ

Update: 2025-03-23 20:49 IST
Photo of Program
  • whatsapp icon

ರಾಯಚೂರು : ನೊಂದವರ ಧ್ವನಿಯಾಗಿ ಬಳಸಿಕೊಂಡು, ಜನರ ನೋವನ್ನು ಅಕ್ಷರ ರೂಪದಲ್ಲಿ ಹೊರಹಾಕುವ ಕಾವ್ಯಗಳನ್ನು ಡಾ.ಸಿದ್ಧಲಿಂಗಯ್ಯ ಅವರು ರಚಿಸಿ ಸಂವೇದನಾಶೀಲ ಕವಿಯಾಗಿದ್ದರು. ನಮ್ಮ ಭಾಗದ ಜಂಬಣ್ಣ ಅಮರಚಿಂತ, ಚೆನ್ನಣ್ಣ ವಾಲೀಕಾರರ ಹಾಗೆ ಸಿದ್ದಲಿಂಗಯ್ಯ ಅವರ ಯೋಚನಾ ಲಹರಿ, ನಿಲುವುಗಳು ಇದ್ದವು ಎಂದು ಯುವಸಾಹಿತಿ ಈರಣ್ಣ ಬೆಂಗಾಲಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ಸರ್ಕಾರಿ ನೌಕರರ ಸಂಘದ ಮನೋರಂಜನಾ ಕೇಂದ್ರದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಸರ್ಕಾರಿ ಎಸ್‍ಸಿ, ಎಸ್‍ಟಿ ನೌಕರರ ಸಮನ್ವಯ ಸಮಿತಿ ಜಿಲ್ಲಾ ಘಟಕ ಹಾಗೂ ಹೊಸಮನಿ ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಕವಿ ಡಾ.ಸಿದ್ಧಲಿಂಗಯ್ಯ ಅವರ ಬದುಕು ಬರಹ ಕುರಿತು ವಿಚಾರ ಸಂಕಿರಣದಲ್ಲಿ ಡಾ.ಸಿದ್ಧಲಿಂಗಯ್ಯ ಅವರ ಬದುಕು ಬರಹದ ಬಗ್ಗೆ ಮಾತನಾಡಿದರು.

ಸದಾ ಶೋಷಿತರ ಪರವಾಗಿ ಮಿಡಿಯುತ್ತಿದ್ದ ಮನಸ್ಸು ಸಿದ್ದಲಿಂಗಯ್ಯ ಅವರದಾಗಿತ್ತು. ಶಿಷ್ಟ ಕಾವ್ಯ ಪರಂಪರೆಯನ್ನು ಮುರಿದು ತಮ್ಮದೇ ಆದ ದಿಟ್ಟ, ನೇರವಾದ ಭಾಷೆಯಿಂದ ಬಂಡಾಯದ ಕವಿತೆಗಳನ್ನು ಬರೆದು ಹೆಸರಾಗಿದ್ದರು. ಅವರ ಕವಿತೆಗಳು ಇಂದಿಗೂ ಅನ್ವಯಿಸುತ್ತವೆ ಎಂದು ತಿಳಿಸಿದರು.

ಡಾ.ಸಿದ್ದಲಿಂಗಯ್ಯ ಅವರ ಸಾಮಾಜಿಕ ಹೋರಾಟಗಳು, ಸಾಂಸ್ಕೃತಿಕ ಕೊಡುಗೆಗಳು ಕುರಿತು ಅಣ್ಣಪ್ಪ ಮೇಟಿಗೌಡ ಮಾತಾಡಿದರು. ಡಾ.ಸಿದ್ದಲಿಂಗಯ್ಯ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮದ ಉದ್ಘಾಟಿಸಿದ ಸಾಹಿತಿ ಬಾಬು ಭಂಡಾರಿಗಲ್ ಮಾತನಾಡಿದರು. ಪ್ರಾಸ್ತಾವಿಕ ವಾಗಿ ಬಶೀರ್‌ ಅಹ್ಮದ್‌ ಹೊಸಮನಿ ಮಾತಾಡಿದರು.

ಅಧ್ಯಕ್ಷತೆಯನ್ನು ಜಿಂದಪ್ಪ ಅವರು ವಹಿಸಿದ್ದರು. ತಾಯರಾಜ, ಕೆ.ಜಿ.ವೀರೇಶ, ಇಮಾಮುದ್ದೀನ್ ಮಾಡಗಿರಿ, ಮಹಾಂತೇಶ್, ಬಸವರಾಜ ನಾಯಕ ಹಾಗೂ ಭಗತರಾಜ ನಿಜಮಕಾರಿ, ತಿಮ್ಮಯ್ಯ, ಎಚ್.ಎಚ್.ಮ್ಯಾದಾರ್, ಅ ಮಲ್ಲಿಕಾರ್ಜುನ, ಮಲ್ಲೇಶ್, ರಾಮಣ್ಣ ಬೊಯರ್ ಹಾಗೂ ಮತ್ತಿತರರಿದ್ದರು.

ರಾಮಣ್ಣ ಮ್ಯಾದಾರ್ ಪ್ರಾರ್ಥಿಸಿದರು. ಶಿಕ್ಷಕ ಶಿವರಾಜ ನಿರೂಪಿಸಿದರು. ಸಂತೋಷ ನಂದಿನಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News