ರಾಯಚೂರು | ಪದವಿ ಮೊದಲನೆ ಸೆಮಿಸ್ಟರ್ ಪರೀಕ್ಷೆ ಏಕಾಏಕಿ ರದ್ದು; ಗೊಂದಲದ ವಾತಾವರಣ ನಿರ್ಮಾಣ

ಸಾಂದರ್ಭಿಕ ಚಿತ್ರ
ರಾಯಚೂರು: ಇಲ್ಲಿನ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದಲ್ಲಿ ಭಾನುವಾರ ನಿಗದಿಯಾಗಿದ್ದ ಬಿಎ, ಬಿಕಾಂ, ಬಿಎಸ್ಸಿ, ಬಿಬಿಎಂ ಮತ್ತು ಬಿಎಸ್ ಡಬ್ಲ್ಯೂ ಪ್ರಥಮ ಸೆಮಿಸ್ಟರ ಪರೀಕ್ಷೆ ಮುಂದೂಡಲಾಗಿದ್ದು, ವಿದ್ಯಾರ್ಥಿಗಳ ಅಸಮಾಧಾನಕ್ಕೆ ಕಾರಣವಾಯಿತು.
ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಪದವಿ ಕಾಲೇಜುಗಳ ಪರೀಕ್ಷೆಯನ್ನು ತಾಂತ್ರಿಕ ಕಾರಣದಿಂದ ಭಾನುವಾರ ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆವರೆಗೆ ನಿಗದಿ ಮಾಡಲಾಗಿತ್ತು.ಇದಕ್ಕಾಗಿ ಎರಡು ಜಿಲ್ಲೆಗಳ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಹಾಗೂ ಇತರೆ ಕಾಲೇಜುಗಳಲ್ಲಿ ಪರೀಕ್ಷಾ ಕೇಂದ್ರಕ್ಕೆ ಬಂದು ಮರಳುವಂತಾಯಿತು. ಪರೀಕ್ಷೆ ರದ್ದಾಗಲು ಖಚಿತ ಕಾರಣ ತಿಳಿದುಬಂದಿಲ್ಲ. ಉಳಿದ ಪರೀಕ್ಷೆಗಳು ನಿಗಧಿತ ವೇಳಾಪಟ್ಟಿಯಂತೆ ನಡೆಯಲಿವೆ. ರದ್ದಾದ ಪರೀಕ್ಷಾ ದಿನಾಂಕ ಮುಂದಿನ ದಿನಗಳಲ್ಲಿ ಪ್ರಕಟಿಸುವುದಾಗಿ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಜ್ಯೋತಿ ದಮ್ನು ಪ್ರಕಾಶ ಆದೇಶದಲ್ಲಿ ತಿಳಿಸಿದ್ದಾರೆ.
ಏಕಾಏಕಿ ಪರೀಕ್ಷೆರದ್ದುಗೊಳಿಸಿದ್ದು ಸರಿಯಲ್ಲ ಒಂದು ದಿನ ಮುಂಚೆ ವಾಟ್ಸಪ್ ಗ್ರ ಪ್ ಗಳಲ್ಲಿಮೆಸೇಜ್ ಆದರೂ ಹಾಕಬಹುದಿತ್ತು ಎಂದು ಪರೀಕ್ಷಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.