ಸಚಿವ ರಾಜಣ್ಣರ ಮೇಲೆ ಹನಿ ಟ್ರ್ಯಾಪ್ ಯತ್ನ ಆಗಿದೆ ಅಷ್ಟೇ : ಸಚಿವ ಎನ್.ಎಸ್.ಬೋಸರಾಜು

ಎನ್.ಎಸ್.ಭೋಸರಾಜು
ರಾಯಚೂರು : ಸಚಿವ ಕೆ.ಎನ್ ರಾಜಣ್ಣ ಮೇಲೆ ಹನಿ ಟ್ರ್ಯಾಪ್ ಆಗಿಲ್ಲ. ಕೇವಲ ಹನಿ ಟ್ರ್ಯಾಪ್ ಯತ್ನ ಆಗಿದೆ ಅಷ್ಟೇ. ಈ ಬಗ್ಗೆ ದೂರು ಬಂದ ತಕ್ಷಣ ಗಂಭೀರವಾಗಿ ಪರಿಶೀಲನೆ ಮಾಡುತ್ತೇವೆ. ಕಠಿಣ ಕ್ರಮ ಕೈಗೊಳುತ್ತೇವೆ ಎಂದು ಸರ್ಕಾರ ಹೇಳಿದೆ. ರಾಜಕೀಯವಾಗಿ ಎಲ್ಲಾ ಪಕ್ಷದವರ ಮೇಲೆ ಹನಿ ಟ್ರ್ಯಾಪ್ ಯತ್ನ ಆಗಿದೆ. ಸದಾಶಿವ ನಗರದಲ್ಲಿ ಎಲ್ಲಾ ಪಕ್ಷದ ನಾಯಕರು ಇದ್ದಾರೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ತಿಳಿಸಿದರು.
ಅವರಿಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಹನಿಟ್ರ್ಯಾಪ್ ಬಗ್ಗೆ ನಾವು ಯಾರ ಮೇಲೂ ಸಸ್ಪೆಕ್ಟ್ ಮಾಡೋಕಾಗಲ್ಲ. ತಕ್ಷಣಕ್ಕೆ ತನಿಖೆ ನಡೆಯುತ್ತದೆ ಯಾವುದೇ ಸಮಸ್ಯೆ ಇಲ್ಲ. ಇದನ್ನೆಲ್ಲಾ ಯಾರು ಮಾಡ್ತಿದಾರೆ ಅಂತ ಯಾರೂ ಹೇಳಿಲ್ಲಾ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲರ ಮೇಲೂ ಹನಿಟ್ರ್ಯಾಪ್ ನಡೆದಿದೆ ಎಂದರು.
ಸಚಿವರು ಏನ್ ಮಾಡುತ್ತಾರೆ, ಅವರ ಕಚೇರಿಯಲ್ಲಿ ಏನ್ ನಡೆಯುತ್ತಿದೆ ಎಂದು ಕೆಲವರು ಬಹಳ ಪ್ರಯತ್ನ ಮಾಡಿದ್ದಾರೆ. ಈ ಪಾರ್ಟಿ ಆ ಪಾರ್ಟಿ ಅಂತ ಇಲ್ಲಾ ಎಲ್ಲರ ಮೇಲೂ ಹನಿ ಟ್ರ್ಯಾಪ್ ಯತ್ನ ನಡೆದಿದೆ. ತಪ್ಪು ಯಾರೇ ಮಾಡಿದ್ರು ಅವರಿಗೆ ಶಿಕ್ಷೆ ಆಗುತ್ತೆ ಎಂದ ಸಚಿವರು ಸ್ಪಷ್ಟಪಡಿಸಿದರು.
ವಿಧಾನಸಭೆ ಸಭಾಪತಿ ಕಂಟ್ರೋಲ್‌ನಲ್ಲಿ ಎಲ್ಲಾ ಸಚಿವರು, ಶಾಸಕರು ಇರ್ತಾರೆ. ಆದರೆ ಬಿಜೆಪಿಯವರು ಪೀಠಕ್ಕೆ ಅಗೌರವ ಮಾಡಿದ್ದಾರೆ. ವಿಧಾನ ಪರಿಷತ್ ಸಭಾಪತಿಗಳು ಎದ್ದು ನಿಂತ್ರೆ ನಾವು ನಿಲ್ಲಬೇಕು. ನಿಯಮಗಳನ್ನು ಮೀರಿ ಯಾರೂ ನಡೆದುಕೊಳ್ಳಬಾರದು. ವಿಧಾನ ಮಂಡಲದಲ್ಲಿ ಸರ್ಕಾರಕ್ಕೆ ಯಾವುದೇ ವಿಶೇಷ ಅಧಿಕಾರ ಇರಲ್ಲಾ. ಆರ್.ಅಶೋಕ್ ಗೃಹ ಇಲಾಖೆ ಸಚಿವರಾಗಿದ್ದವರು. ನಮ್ಮವರನ್ನು ಆರ್.ಅಶೋಕ್ ತಳ್ಳಾಡಿದ್ದಾರೆ, ಪೀಠಕ್ಕೆ ಅಗೌರವ ಸಲ್ಲಿಸಿದ್ದಾರೆ. ನಮ್ಮ ಮುಖದ ಮೇಲೆ ಪೇಪರ್ ಗಳನ್ನು ಎಸೆದಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಈ ರೀತಿ ಘಟನೆಗಳು ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿ.ವೈ.ವಿಜಯೇಂದ್ರ ಹೇಳಿಕೆಗಳಿಗೆ ಬೆಲೆ ಕೊಡುವ ಅಗತ್ಯವಿಲ್ಲ :
ವಿಜಯೇಂದ್ರ ಅವರ ಅಪ್ಪ ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ರಾತ್ರಿ 11 ರಿಂದ ಬೆಳಿಗ್ಗೆ 5 ಗಂಟೆವರೆಗೆ ವ್ಯವಹಾರಗಳನ್ನ ಮಾಡಿದ್ದಾರೆ. ಈಗ ಪಕ್ಷದ ಅಧ್ಯಕ್ಷರಾದ ಮೇಲೆ ಅವರ ಪಾರ್ಟಿಯವರೇ ಅವರನ್ನ ಒಪ್ಪುತ್ತಿಲ್ಲ. ಅವರೊಬ್ಬ ಬಚ್ಚಾ ,ಅವರಿಗೆ ರಾಜಕೀಯ ಗೊತ್ತಿಲ್ಲ ಅಂತ ಅವರ ಪಕ್ಷದವರೇ ಹೇಳ್ತಾರೆ ಎಂದು ಟೀಕಿಸಿದರು