ಎಫ್‌ಪಿವಿ ವೈರಸ್‌ಗೆ ರಾಯಚೂರಿನಲ್ಲಿ 38 ಬೆಕ್ಕುಗಳು ಬಲಿ

Update: 2025-03-26 09:40 IST
ಎಫ್‌ಪಿವಿ ವೈರಸ್‌ಗೆ ರಾಯಚೂರಿನಲ್ಲಿ 38 ಬೆಕ್ಕುಗಳು ಬಲಿ
  • whatsapp icon

ರಾಯಚೂರು : ಕಳೆದ ಕೆಲ ದಿನಗಳಿಂದ ಫೆಲಿನಾ ಪ್ಯಾನಲಿಕೊಪೆನಿಯಾ ವೈರಸ್‌ಗೆ (ಎಫ್‌ಪಿವಿ) ಸುಮಾರು ಜಿಲ್ಲೆಯಲ್ಲಿ 38ಕ್ಕೂ ಹೆಚ್ಚು ಬೆಕ್ಕುಗಳು ಮೃತಪಟ್ಟ ಘಟನೆ ವರದಿಯಾಗಿದೆ.

ಜಿಲ್ಲೆಯಲ್ಲಿ ಹಕ್ಕಿಜ್ವರದಿಂದ ಪಕ್ಷಿಗಳ ಮಾರಣಹೋಮ ನಡೆದಿದ್ದರೆ, ಈಗ ಈ ವೈರಸ್ ನಿಂದ ಬೆಕ್ಕುಗಳು ಸಾವನ್ನಪ್ಪುತ್ತಿದೆ. ಬೆಕ್ಕುಗಳಲ್ಲಿ ವಾಂತಿ ಭೇದಿ ಕಾಣಿಸಿಕೊಳ್ಳುತ್ತಿದ್ದು, ಚಿಕಿತ್ಸೆ ನೀಡಿದರೂ ಚೇತರಿಸಿಕೊಳ್ಳದೆ ಸಾವನ್ನಪ್ಪುತ್ತಿವೆ. ಪರ್ಶಿಯನ್ ಬೆಕ್ಕುಗಳನ್ನು ಸಾಕಿಕೊಂಡಿರುವ ಪ್ರಾಣಿಪ್ರಿಯರಲ್ಲಿ ಈಗ ಆತಂಕ ಹೆಚ್ಚಾಗುತ್ತಿದ್ದು, ಎಲ್ಲ ಜಾತಿಯ ಬೆಕ್ಕುಗಳಿಗೂ ಈ ವೈರಸ್ ಹರಡಿಕೊಳ್ಳುತ್ತಿದೆ. ಜಿಲ್ಲೆಯಲ್ಲಿ ಕಳೆದ 20ದಿನಗಳಲ್ಲಿ 70 ಬೆಕ್ಕುಗಳಲ್ಲಿ ವೈರಸ್ ಕಾಣಿಸಿಕೊಂಡಿದೆ. ಅದರಲ್ಲಿ 38 ಬೆಕ್ಕುಗಳು ಸಾವನ್ನಪ್ಪಿವೆ.

ಬೆಕ್ಕು ಸಾಕಿದ ಮಾಲಕರಲ್ಲಿ ಆತಂಕ ಸೃಷ್ಟಿಯಾಗಿದ್ದು, ವಿಚಿತ್ರ ಕಾಯಿಲೆಯಿಂದ ಬೆಕ್ಕುಗಳ ಸ್ಥಿತಿ ನೋಡಿ ಮರುಕ ಪಡುತ್ತಿದ್ದಾರೆ.

ಈ‌ ಬಗ್ಗೆ ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಎಸ್.ಎಸ್.ಪಾಟೀಲ್ ಮಾತನಾಡಿ, ಈ ವೈರಸ್ ಇಂದು‌ ನಿನ್ನೆಯದ್ದಲ್ಲ ಅನೇಕ ವರ್ಷಗಳಿಂದ ಇದೆ ಆದರೆ ಬಯಲಿಗೆ ಬರುತ್ತಿರಲಿಲ್ಲ. ಬೆಕ್ಕುಗಳಿಗೆ ಮೂರು ವಾರದ ಮರಿಗಳಿದ್ದಾಗಲೇ ವ್ಯಾಕ್ಸಿನೇಶನ್ ಮಾಡಬೇಕು. ಅದಾದ ಬಳಿಕ ಬೂಸ್ಟರ್ ಡೋಸ್ ನೀಡಬೇಕು. ಆದರೆ, ಈ ವ್ಯಾಕ್ಸಿನ್ ಸರ್ಕಾರದಿಂದ ಪೂರೈಕೆಯಾಗುತ್ತಿಲ್ಲ. ಖಾಸಗಿಯವರಿಂದಲೇ ಖರೀದಿಸಬೇಕಿದ್ದು, 900 ರೂ. ಖರ್ಚಾಗುತ್ತದೆ. ಬೆಕ್ಕು ಸಾಕಿದವರು ವ್ಯಾಕ್ಸಿನ್ ಹಾಕಿಸಿದರೆ ಬೀದಿ ಬೆಕ್ಕುಗಳಿಗೆ ಯಾವುದೇ ವ್ಯಾಕ್ಸಿನ್ ಸಿಗದೆ ಬೇಗನೇ ವೈರಸ್‌ಗೆ ತುತ್ತಾಗುತ್ತಿವೆ. ಇದು ಬೆಕ್ಕುಗಳಿಂದ‌ ಬೆಕ್ಕುಗಳಿಗೆ ಮಾತ್ರ ಹಡುತ್ತದೆ. ಈ ವೈರಸ್ ಮನುಷ್ಯರಿಗೆ ಯಾವುದೇ ಅಪಾಯ ತರುವುದಿಲ್ಲ ಎಂದು ಪ್ರತಿಕ್ರಿಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News