ರಾಯಚೂರು: ಕೋಟ್ಯಂತರ ರೂ. ವಂಚನೆ; ಬ್ಯಾಂಕ್ ಮ್ಯಾನೇಜರ್ ವಿರುದ್ಧ ಪ್ರಕರಣ ದಾಖಲು

ಕೆ.ನರೇಂದ್ರ ರೆಡ್ಡಿ
ರಾಯಚೂರು: ನಗರದ ಮಹಾರಾಷ್ಟ್ರ ಬ್ಯಾಂಕ್ ಶಾಖೆಯ ಮ್ಯಾನೇಜರ್ ಗ್ರಾಹಕರಿಗೆ ತಿಳಿಯದಂತೆ ನಕಲಿ ದಾಖಲೆ ಸೃಷ್ಟಿಸಿ ಗೋಲ್ಡ್ ಲೋನ್ ಮಂಜೂರು ಮಾಡಿ 10 ಕೋಟಿ ವಂಚಿಸಿರುವ ಪ್ರಕರಣ ಬಯಲಾಗಿದೆ.
ಬ್ಯಾಂಕ್ ಆಫ್ ಮಹಾರಾಷ್ಟ್ರ ಬ್ಯಾಂಕ್ ಮ್ಯಾನೇಜರ್ ಕೆ.ನರೇಂದ್ರ ರೆಡ್ಡಿ ಎಂಬಾತ 10.97 ಕೋಟಿ ವಂಚಿಸಿರುವ ಬಗ್ಗೆ ಬ್ಯಾಂಕ್ ಅಡಿಟ್ ನಲ್ಲಿ ಬಯಲಾಗಿದೆ. ನಕಲಿ ಖಾತೆಗಳಿಂದ ಸಂಬಂಧಿಕರ ಖಾತೆಗೆ ಹಣ ವರ್ಗಾವಣೆ ಮಾಡಿದ್ದು29 ನಕಲಿ ಖಾತೆಗಳಿಗೆ ಗೋಲ್ಡ್ ಲೋನ್ ಹೆಸರಿನಲ್ಲಿ ವರ್ಗಾವಣೆಮಾಡಿರುವುದು ಪತ್ತೆಯಾಗಿದೆ.
ನಕಲಿ ಗೋಲ್ಡ್ ಲೋನ್ ಖಾತೆಗಳಿಂದ 8 ಮಂದಿ ಸಂಬಂಧಿಕರಿಗೆ, ಹಿಂದೆ ಕೆಲಸ ಮಾಡುತ್ತಿದ್ದ ಬ್ಯಾಂಕ್ ನ ಸಹೋದ್ಯೋಗಿಯ ಹೆಸರಿಗೆ 88 ಲಕ್ಷ ರೂ. ವರ್ಗಾವಣೆ ಮಾಡಿದ್ದ ಎನ್ನಲಾಗಿದೆ.
ವಂಚನೆ ಬಯಲಾಗುತ್ತಿದ್ದಂತೆ ಬ್ಯಾಂಕ್ ನಿಂದ ಮ್ಯಾನೇಜರ್ ಕೆ.ನರೇಂದ್ರ ರೆಡ್ಡಿ ಪರಾರಿಯಾಗಿದ್ದಾನೆ. ಮ್ಯಾನೇಜರ್ ಕೆ. ನರೇಂದ್ರ ರೆಡ್ಡಿ ವಿರುದ್ಧ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿದು ಬಂದಿದೆ.
ಬ್ಯಾಂಕ್ ಆಫ್ ಮಹಾರಾಷ್ಟ್ರದ ರೀಜಿನಲ್ ಮ್ಯಾನೇಜರ್ ಸುಚೇತ್ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.