ರಾಯಚೂರು | ಬೀದಿ ನಾಯಿಗಳ ದಾಳಿಗೆ ಐದು ವರ್ಷದ ಬಾಲಕ ಮೃತ್ಯು
Update: 2025-03-30 17:43 IST
ಸಾಂದರ್ಭಿಕ ಚಿತ್ರ
ರಾಯಚೂರು : ಬೀದಿ ನಾಯಿಗಳ ದಾಳಿಯಿಂದ ಐದು ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಲಿಂಗಸೂಗೂರು ತಾಲ್ಲೂಕು ಕಸಬಾ ಲಿಂಗಸೂಗೂರು ಗ್ರಾಮದಲ್ಲಿ ನಡೆದಿದೆ.
ಸಿದ್ದು ಬೀರಪ್ಪ ಮೃತ ಬಾಲಕ ಎಂದು ಗುರುತಿಸಲಾಗಿದೆ. ಬಹಿರ್ದೆಸೆಗೆ ತೆರಳಿದ್ದ ವೇಳೆ ಬೀದಿ ನಾಯಿಗಳ ಗುಂಪೊಂದು ಬಾಲಕನ ಮೇಲೆ ದಾಳಿ ಮಾಡಿ ಎಳೆದಾಡಿ ಗಂಭೀರ ಗಾಯಗೊಳಿಸಿತ್ತು ಎನ್ನಲಾಗಿದೆ.
ಬಳಿಕ ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಾದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆಗೆ ರವಾನಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗಿ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.