ರಾಯಚೂರು | ಕಾಡು ಮೊಲಗಳನ್ನು ಬೇಟೆಯಾಡಿ ರಸ್ತೆಯಲ್ಲಿ ಮೆರವಣಿಗೆ : ಶಾಸಕರ ಪುತ್ರ, ಸೋದರನ ಕೃತ್ಯಕ್ಕೆ ವ್ಯಾಪಕ ಆಕ್ರೋಶ
Update: 2025-04-01 16:31 IST

ರಾಯಚೂರು : ಜಿಲ್ಲೆಯ ಮಸ್ಕಿ ಕ್ಷೇತ್ರದ ಶಾಸಕ ಬಸನಗೌಡ ತುರವಿಹಾಳ ಅವರ ಪುತ್ರ ಮತ್ತು ಸೋದರ ಕಾಡು ಮೊಲಗಳನ್ನು ಹಿಡಿದು ಬೇಟೆಯಾಡಿದ್ದಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರ ಹಿಡಿದು ಸಂಭ್ರಮಾಚರಣೆ ನಡೆಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಸ್ಕಿಯ ಶಂಕರಲಿಂಗೇಶ್ವರ ಜಾತ್ರೆಯಲ್ಲಿ ಭಾಗವಹಿಸಿದ್ಧ ಶಾಸಕ ಬಸನಗೌಡ ತುರವಿಹಾಳ ಅವರ ಪುತ್ರ ಮತ್ತು ಸೋದರ ಮೊಲ ಬೇಟೆಯಾಡಿದ್ದಲ್ಲದೇ ಅವುಗಳನ್ನು ಮಾರಕಾಸ್ತ್ರಗಳೊಂದಿಗೆ ಪ್ರದರ್ಶಿಸಿ ಮೆರವಣಿಗೆ ಮಾಡಿದ್ದರು. ಮೊಲಗಳನ್ನು ಬೇಟೆಯಾಡಿ ಮೆರವಣಿಗೆ ಮಾಡಿಸಿಕೊಂಡಿರುವ ಶಾಸಕರ ಕುಟುಂಬಸ್ಥರ ವರ್ತನೆಗೆ ಈಗ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಈ ದುಷ್ಕೃತ್ಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.