ರಾಯಚೂರು | ವಿದ್ಯುತ್ ಆಘಾತದಿಂದ ಯುವಕ ಮೃತ್ಯು

ರಾಯಚೂರು : ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದಗಣಿ ಕಂಪನಿಯ ವಿಲೇಜ್ ಶಾಫ್ಟ್ ಪಕ್ಕದಲ್ಲಿರುವ ಕಾರ್ಮಿಕರ ವಾಚ್ ಮೆನ್ ಕ್ವಾಟ್ರಸ್ ನಲ್ಲಿ ಯುವಕನೊರ್ವ ವಿದ್ಯುತ್ ಆಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.
ಹಟ್ಟಿ ಕಂಪನಿಯ ಅಧಿಕಾರಿಗಳ ನಿರ್ಲಕ್ಷತನದಿಂದ ಯುವಕ ಮೃತಪಟ್ಟಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.
ಯುವಕನ ಕುಟುಂಬಸ್ಥರಿಗೆ ಪರಿಹಾರ ನೀಡಬೇಕು ಮತ್ತು ಈ ಘಟನೆಗೆ ಕಾರಣವಾದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು. ಯುವಕನ ಸಾವಿಗೆ ಹಟ್ಟಿ ಚಿನ್ನದ ಕಂಪನಿಯ ಅಧಿಕಾರಿಗಳೇ ನೇರ ಹೊಣೆ. ಅಧಿಕಾರಿಗಳ ನಿರ್ಲಕ್ಷತನದಿಂದ ಈ ದುರ್ಘಟನೆ ನಡೆದಿದೆ ಎಂದು ಆರೋಪಿಸಿ ಯುವಕನ ಸಂಬಂಧಿಕರು ಪ್ರತಿಭಟನೆ ನಡೆಸಿದರು.
ಹಟ್ಟಿ ಪಟ್ಟಣದ ಕಾಂಗ್ರೆಸ್ ಮುಖಂಡರಾದ ಅಮ್ಹದ್ ಸೇಟ್, ಇಸ್ಮಾಯಿಲ್ ಪಾಷಾ, ಮೌಲಾ ಮಾಸ್ಟರ್, ಶೇಕ್ ಹುಸೇನ್ ಸೌದಾಗರ್, ಸೈಯದ್ ಟೈಲರ್, ಮೌನೇಶ್ ಕಾಕಾ ನಗರ ಮುಖಂಡರು ಹಟ್ಟಿ ಚಿನ್ನದ ಕಂಪನಿ ಅಧಿಕಾರಿಗಳು ಸ್ಥಳಕ್ಕೆ ಬಂದು ಮೃತ ಪಟ್ಟ ಯುವಕನ ಕುಟುಂಬಕ್ಕೆ ಪರಿಹಾರ ನೀಡುವವರೆಗೂ ಮೃತ ದೇಹ ತೆಗೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಹಟ್ಟಿ ಪೊಲೀಸ್ ಠಾಣೆಯ ಪಿಎಸ್‌ಐ ಧರ್ಮಣ್ಣ, ಹುಚುರೆಡ್ಡಿ, ಅಮರೇಶ್ ಸೇರಿದಂತೆ ಹಟ್ಟಿ ಕಂಪನಿಯ ಭದ್ರತಾ ಸಿಬ್ಬಂದಿ ಉಪಸ್ಥಿತರಿದ್ದರು.