ರಾಯಚೂರು | ವನ್ಯಜೀವಿ ಸಂರಕ್ಷಕರಿಗೆ ಸಂಬಂಧಿಸಿದ ನಿಯಮ ರೂಪಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲು ತೀರ್ಮಾನ

Update: 2025-04-04 18:16 IST
ರಾಯಚೂರು | ವನ್ಯಜೀವಿ ಸಂರಕ್ಷಕರಿಗೆ ಸಂಬಂಧಿಸಿದ ನಿಯಮ ರೂಪಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲು ತೀರ್ಮಾನ
  • whatsapp icon

ರಾಯಚೂರು : ವನ್ಯಜೀವಿ ಸಂರಕ್ಷರಿಗೆ ಪೂರ್ವಾನುಮತಿ ಹಾಗೂ ಅವಘಢ ಸಂಭವಿಸಿದಲ್ಲಿ ಆರ್ಥಿಕ ನೆರವು ನೀಡುವ ನಿಯಮಗಳನ್ನು ಜಾರಿಗೊಳಿಸುವಂತೆ ಸರ್ಕಾರಕ್ಕೆ ಅಧ್ಯಾಯನ ವರದಿ ಸಲ್ಲಿಸಿ ಮನವಿ ಮಾಡಲಾಗುವುದು ಎಂದು ರಾಜ್ಯ ವನ್ಯಜೀವಿ ಸಂರಕ್ಷಕರ ಸಮಾಜ ರಾಜ್ಯ ಸಮಿತಿಯ ರಾಜ್ಯಧ್ಯಕ್ಷ ಪ್ರಸನ್ನ ಕುಮಾರ ಹೇಳಿದರು.

ನಗರದಲ್ಲಿ ಇಂದು ವನ್ಯಜೀವಿ ರಕ್ಷಕರ ರಾಜ್ಯ ಮಟ್ಟದ ಸಭೆ ನಡೆಸಿ ಮಾತನಾಡಿದ ಅವರು, ರಾಜ್ಯದಾಧ್ಯಂತ ವನ್ಯಜೀ ವಿಗಳ ಸಂರಕ್ಷಣೆಯಲ್ಲಿ ಅನೇಕರು ತಮ್ಮದೇ ಆದ ಕೆಲಸ ಮಾಡುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರದಿಂದ ಯಾವುದೇ ಪ್ರೋತ್ಸಾಹ, ರಕ್ಷಣೆ ಸಿಗುತ್ತಿಲ್ಲ. ಅಲ್ಲದೇ ಯಾವುದೇ ನಿಯಮಗಳಿಲ್ಲದೇ ಇರುವುದರಿಂದ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದರು.

ವಿಷಕಾರಿ ಜೀವಿಗಳು ಸೇರಿದಂತೆ ಅಪಾಯದಲ್ಲಿರುವ ಪ್ರಾಣಿ, ಪಕ್ಷಿಗಳ ರಕ್ಷಣೆ ಮಾಡಲಾಗುತ್ತಿದೆ. ಅನೇಕ ಬಾರಿ ಪೂರ್ವಾನುಮತಿಯಿಲ್ಲದೇ ರಕ್ಷಿಸಲು ಆಗುವುದಿಲ್ಲ, ಇದು ಅನೇಕ ಸಂದರ್ಭಗಳಲ್ಲಿ ಅಪಾಯಗಳಿಗೂ ಕಾರಣವಾಗುತ್ತಿದೆ. ಸಾರ್ವಜನಿಕರ ಜೀವ ರಕ್ಷಣೆಗೆ ಸರ್ಕಾರ ಪೂರ್ವಾನುಮತಿ ನಿಯಮಗಳನ್ನು ಸರಳಿಗೊಳಿಸಬೇಕು. ಆಕಸ್ಮಿಕವಾಗಿ ಸಂಭವಿಸುವ ಘಟನೆಗಳಿಗೆ ಆರ್ಥಿಕ ನೆರವು ನೀಡುವ ಯೋಜನೆಗಳನ್ನು ರೂಪಿಸಲು ರಾಜ್ಯದಾಧ್ಯಂತ ಸಂಘಟನೆ ಬಲಪಡಿಸಿ ಸರ್ಕಾರ ಗಮನ ಸೆಳೆಯಲು ಉದ್ದೇಶಿಸಿಲಾಗಿದೆ ಎಂದರು.

ರಾಯಚೂರು ವಿಭಾಗದ ಅಧ್ಯಕ್ಷರಾಗಿ ಉರಗ ತಜ್ಞ ಅಪ್ಪರ್ ಹುಸೇನ್ ಅವರನ್ನು ನೇಮಕ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿಯೂ ಸಂಘಟನೆಯನ್ನು ರಚಿಸಿ ಸರ್ಕಾರದ ಗಮನ ಸೆಳೆಯುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ರಾಜ್ಯ ಉಪಾಧ್ಯಕ್ಷ ಶಿವರಾಜ, ಮೋಹನ, ಸ್ನೇಕ್ಬ ಅಫ್ಸರ್ ಹುಸೇನ್ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News