ಲಿಂಗಸಗೂರು: ವಾಂತಿಭೇದಿಯಿಂದ ಹಲವರು ಅಸ್ವಸ್ಥ; ಆಸ್ಪತ್ರೆಗೆ ದಾಖಲು

ರಾಯಚೂರು: ವಾಂತಿ ಭೇದಿಯಿಂದ ಅಸ್ವಸ್ಥಗೊಂಡ 10 ಜನರನ್ನು ಆಸ್ಪತ್ರೆಗೆ ದಾಖಲಿಸಿರುವ ಘಟನೆ ಲಿಂಗಸುಗೂರು ತಾಲೂಕಿನ ಗೊರೆಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲಬಾವಿ ತಾಂಡದಲ್ಲಿ ನಡೆದಿದೆ.
ವಾಂತಿಭೇದಿಯಿಂದ ಅಸ್ವಸ್ಥರಾದವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಈಚನಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲು ಮಾಡಲಾಗಿದ್ದು ಇನ್ನು ಕೆಲವರನ್ನು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾತ್ಕಾಲಿಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯಾಧಿಕಾರಿ ತಿಳಿಸಿದರು.
ವಾಂತಿ ಭೇದಿ ಕಾರಣಕ್ಕೆ ಗ್ರಾಮದ ಕುಡಿಯುವ ನೀರಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು ಪರೀಕ್ಷೆಯ ನಂತರ ಖಚಿತ ಮಾಹಿತಿ ತಿಳಿಯಲಿದೆ ಎಂದು ಈಚನಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾಕ್ಟರ್ ಸಿದ್ದಣ್ಣ ಹೇಳಿದರು.
ನೀರು ಅಥವಾ ಇನ್ನಿತರ ಯಾವುದೇ ಕಾರಣದಿಂದ ವಾಂತಿಭೇದಿಯಾಗಿಲ್ಲ. ಊಟದಲ್ಲಿ ಸ್ವಲ್ಪ ಲೋಪದೋಷವಾಗಿರುವ ಕಾರಣಕ್ಕಾಗಿ ವಾಂತಿ ಬೇದಿಯಾಗಿದೆ ವಿನಃ ಇನ್ನಿತರ ಯಾವುದೇ ಕಾರಣಕ್ಕೂ ಇರುವುದಿಲ್ಲ ಎಂದರು.