ಲಿಂಗಸುಗೂರು: ವಿದ್ಯುತ್ ತಂತಿ ತಗುಲಿ ಮೂರು ಎಮ್ಮೆ ಸಾವು
Update: 2025-03-29 11:54 IST

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಬಳಿಯ ಬನ್ನಿಗೋಳ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಮೂರು ಎಮ್ಮೆ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬನ್ನಿಗೋಳ ಗ್ರಾಮದ ಪರಪ್ಪ ಕುಂಬಾರ ಎರಡು ಎಮ್ಮೆಗಳು ಹಾಗೂ ಶರಣಪ್ಪ ಜಂಗ್ಲಿ ಒಂದು ಎಮ್ಮೆ ಸಾವನ್ನಪ್ಪಿವೆ ಎಂದು ಹೇಳಲಾಗಿದೆ.
ಉಳಿಮಹೇಶ್ವರ ಗ್ರಾಮಕ್ಕೆ ವಿದ್ಯುತ್ ಸಂಪರ್ಕಿಸುವ ಹಿನ್ನಲೆಯಲ್ಲಿ ರಸ್ತೆ ಬದಿಯಲ್ಲಿ ಹಾಕಿರುವ ವಿದ್ಯುತ್ ತಂತಿಗಳು ಹರಿದು ಬಿದ್ದು ಘಟನೆ ಸಂಭವಿಸಿದೆ ಎನ್ನಲಾಗಿದೆ.
ಜೆಸ್ಕಾಂ ಇಲಾಖೆಯವರ ನಿರ್ಲಕ್ಷ್ಯಕ್ಕೆ ಎಮ್ಮೆಗಳು ಬಲಿಯಾಗಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಸುಮಾರು ಲಕ್ಷಾಂತರ ರೂಗಳ ಎಮ್ಮೆ ಕಳೆದುಕೊಂಡಿರುವ ನೊಂದ ರೈತರ ಕುಟುಂಬಕ್ಕೆ ಸರಕಾರ ಪರಿಹಾರ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.
ಘಟನಾ ಸ್ಥಳಕ್ಕೆ ಮುದಗಲ್ ಪಶು ವೈದ್ಯಾಧಿಕಾರಿ ಡಾ.ಖಾಸಿಂ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.