ರಾಯಚೂರು | ಮಿಟ್ಟಿಮಲ್ಕಾಪುರ್ ಗ್ರಾಮದಲ್ಲಿ ಕುಡಿಯುವ ನೀರಿನ ಸರಬರಾಜು ಕಾಮಗಾರಿಗೆ ಚಾಲನೆ

ರಾಯಚೂರು : ತಾಲೂಕಿನ ಮಿಟ್ಟಿ ಮಲ್ಕಾಪುರ್ ಗ್ರಾಮದಲ್ಲಿ ದಿನದ 24 ಗಂಟೆ ನೀರು ಸರಬರಾಜು ಕಾಮಗಾರಿಗೆ ಚಾಲನೆ ಶಾಸಕ ಡಾ.ಶಿವರಾಜ ಪಾಟೀಲ್ ನಳಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ದೇಶದಲ್ಲಿ ಜಲಜೀವನ್ ಮಿಷನ್ ಯೋಜನೆ ಯಶಸ್ವಿಯಾಗಿ ಅನುಷ್ಠಾನ ಆಗುತ್ತಿದ್ದು, ರಾಷ್ಟ್ರ ಮಟ್ಟದಲ್ಲಿ 380 ಲಕ್ಷ ಕೋಟಿ ರೂ. ಅನುದಾನದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ರಾಜ್ಯದಲ್ಲಿ 7,80,000 ಕೋಟಿ ರೂ. ಅನುದಾನದಲ್ಲಿ ಜಲಜೀವನ ಮಿಷನ್ ಯೋಜನೆಯು ಅನುಷ್ಠಾನ ಆಗುತ್ತಿದೆ. ಪ್ರಧಾನಿ ಮೋದಿಯವರ ಕನಸಿನ ಯೋಜನೆಯಾಗಿದ್ದು, ಇದರಿಂದ ಪ್ರತಿ ಮನೆಗೆ ನಳ ಒದಗಿಸಿ ಮನೆ ಬಾಗಿಲಿಗೆ ನೀರು ಸರಬರಾಜು ಮಾಡುವುದು ತುಂಬಾ ಸಂತೋಷದ ವಿಷಯವಾಗಿದೆ ಎಂದರು.
ಇಂದು ರಾಜ್ಯಮಟ್ಟದಲ್ಲಿ ಮಿಟ್ಟಿ ಮಲ್ಕಾಪುರ ಗ್ರಾಮವು 13ನೇ ಗ್ರಾಮವಾಗಿ ಹಾಗೂ ರಾಯಚೂರು ಜಿಲ್ಲೆಯ ಪ್ರಥಮ ಗ್ರಾಮವಾಗಿ ದಿನದ 24 ಗಂಟೆ ನೀರು ಸರಬರಾಜು ಗ್ರಾಮ ಎಂದು ಘೋಷಿಸುವುದು ನಮ್ಮೆಲ್ಲರ ಹೆಮ್ಮೆಯ ವಿಷಯವಾಗಿದೆ ಎಂದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು ಪ್ರತಿ ದಿನ ಮುಂಜಾನೆ ಮನೆ ಮನೆಗೆ ಭೇಟಿ ನೀಡಿ, ನೀರು ಪೋಲಾಗದಂತೆ ನೋಡಿಕೊಳ್ಳಬೇಕು ಹಾಗೂ ಪ್ರತಿ ತಿಂಗಳು ನೀರಿನ ಕರ ಭರಿಸುವಂತೆ ಪ್ರೇರೇಪಿಸಬೇಕು ಎಂದು ಹೇಳಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲನ ಅಭಿಯಂತರ ನಾಗೇಶ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಪವಾರ ಶಾಖಾಧಿಕಾರಿಗಳು ಹಾಗೂ ಜಿಲ್ಲಾ ಯೋಜನಾ ವ್ಯವಸ್ಥಾಪಕ ಬಸವರಾಜ ಗಲಗಿನ್, ಮುಹಮ್ಮದ್ ಖಾನ್, ಡಿಟಿಏಸ್ ಯು ಸಿಬ್ಬಂದಿಗಳು,, ಗ್ರಾಮಸ್ಥರು ಹಾಗೂ ಡಾ.ನಂದಕುಮಾರ ರಾಜ್ಯ ಯೋಜನಾ ಸಮನ್ವಯಾಧಿಕಾರಿ ಫೀಡ್ಬ್ಯಾಕ್ ಫೌಂಡೇಶನ್ ಬೆಂಗಳೂರು, ಸಿಬ್ಬಂದಿಗಳಾದ, ಓಂಕಾರ್, ರವಿ, ಪಂಚಾಯತ್ ಅಧಿಕಾರಿಗಳು, ಸಿಬಂಧಿಗಳು ಉಪಸ್ಥಿತರಿದ್ದರು.
ಪಿಡಿಒ ರೇಣುಕಾ ಪಂಚಾಯತಿ ಹಾಗೂ ಪಿ ಬಿ. ಚೌಹಾನ್ ರವರು ಕಾರ್ಯಕ್ರಮಕ್ಕೆ ವಂದಿಸಿದರು.