ದೇವದುರ್ಗ| ಪತ್ರಕರ್ತರ ಆರೋಗ್ಯ ಕ್ಷೇಮ ಅಭಿವೃದ್ಧಿಗೆ ಹಣ ಮೀಸಲಿಡುವಂತೆ ಮನವಿ

ದೇವದುರ್ಗ : ತಾಲೂಕಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳಿಂದ ಪತ್ರಕರ್ತರ ಆರೋಗ್ಯ ಕ್ಷೇಮ ಅಭಿವೃದ್ಧಿಗೆ ಹಣ ಮೀಸಲಿಡುವಂತೆ ಪುರಸಭೆ ಮುಖ್ಯಾಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳಲಾಯಿತು.
ದಿನನಿತ್ಯ ಒಂದಿಲ್ಲೊಂದು ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಿ, ಹಲವಾರು ಜನಪರ ವರದಿಗಳನ್ನು ಮಾಡಿ ಸರ್ಕಾರ ಮತ್ತು ಜನಸಾಮಾನ್ಯರನ್ನು ಎಚ್ಚರಿಸುವ ಕೆಲಸ ಪತ್ರಕರ್ತರು ಮಾಡಿಕೊಂಡಿಕೊಂಡು ಬಂದಿದಾರೆ. ಇತ್ತೀಚೆಗೆ ಸಾಕಷ್ಟು ಜನ ಪತ್ರಕರ್ತರು ಹಲವು ಅನಾರೋಗ್ಯಕ್ಕೆ ಬಲಿಯಾಗುತ್ತಿದ್ದಾರೆ. ಸರ್ಕಾರದ ವತಿಯಿಂದ ಹೇಳಿಕೊಳ್ಳುವ ಸೌಲಭ್ಯಗಳು ಪಡೆದುಕೊಳ್ಳುವಲ್ಲಿ ಪತ್ರಕರ್ತರ ವಲಯ ವಿಫಲವಾಗಿದೆ. 2025-26 ನೇ ಸಾಲಿನ ಬಜೆಟ್ ನಲ್ಲಿ ಪತ್ರಕರ್ತರ ಆರೋಗ್ಯ ಹಿತರಕ್ಷಣೆಗಾಗಿ ಸುಮಾರು 10 ಲಕ್ಷ ರೂ. ಮೀಸಲಿಡಬೇಕೆಂದು ತಾಲೂಕಿನ ಪುರಸಭೆ ಮುಖ್ಯಾಧಿಕಾರಿಗಳಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾಗಳು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಾಬು ಅಲಿ ಕರಿಗುಡ್ಡ, ಅವರೇಶ ಚಿಲ್ಕರಾಗಿ, ಮಲ್ಲೇಶ್ ಮಾಶೆಟ್ಟಿ, ಬಂದೇನವಾಜ್, ಸುರೇಶ್ ಉಪಸ್ಥಿರಿದ್ದರು