ದೇವದುರ್ಗ| ಅವೈಜ್ಞಾನಿಕ ಅರಕೇರ ತಾಲೂಕು ಘೋಷಣೆ ರದ್ದು ಪಡಿಸುವಂತೆ ವಿ.ಎಂ.ಮೇಟಿ ಆಗ್ರಹ.

Update: 2025-03-23 16:45 IST
Photo of Press meet
  • whatsapp icon

ದೇವದುರ್ಗ: ತಾಲೂಕಿನಲ್ಲಿ ಈ ಹಿಂದೆ ಇದ್ದ ಮಾಜಿ ಸಚಿವ ಕೆ.ಶಿವನಗೌಡ ನಾಯಕ ಅವರು ತಮ್ಮ ರಾಜಕೀಯ ಪ್ರಭಾವ ಬೆಳೆಸಿಕೊಂಡು ಅರಕೇರಾ ತಾಲೂಕನ್ನಾಗಿ ಘೋಷಣೆ ಮಾಡಿದ್ದಾರೆ. ಇದು ಅವೈಜ್ಞಾನಿಕ ಇದನ್ನು ರದ್ದು ಪಡಿಸುವಂತೆ ಇಂದು ಪತ್ರಿಕಾಗೋಷ್ಠಿ ಮೂಲಕ ಆಗ್ರಹಿಸಿದರು.

ಪಟ್ಟಣದ ಬಹುತೇಕ ಗ್ರಾಮ ಪಂಚಾಯತ್‌ ವ್ಯಾಪ್ತಿಯ ನೂರಾರು ಗ್ರಾಮಗಳಾದ ಜಾಲಹಳ್ಳಿ, ಹೊಸೂರು ಸಿದ್ದಾಪುರ, ಸೋಮನ ಮರಡಿ, ಸುಂಕೇಶ್ವರಹಾಳ, ರಾಮದುರ್ಗ ಜಿನ್ನಾಪುರ, ಸೇರಿದಂತೆ ಹಲವಾರು ಗ್ರಾಮಸ್ಥರ ಸಭೆ ಸಮಾರಂಭ ಮಾಡದೆ. ಕನಿಷ್ಠ ಪಕ್ಷ ಅವರಿಗೆ ಒಂದು ಮಾತು ಕೇಳದೆ. ಆ ಗ್ರಾಮಸ್ಥರ ವಿರೋಧದ ನಡುವೆ ತಮ್ಮ ರಾಜಕೀಯ ಲಾಭಕ್ಕಾಗಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಅರಕೇರಾ ತಾಲೂಕು ಮಾಡಿದ್ದಾರೆ.

ಈ ಅವೈಜ್ಞಾನಿಕವಾಗಿ ನಿರ್ಧಾರದಿಂದ ತಾಲೂಕನ್ನಾಗಿ ಈ ಭಾಗದ ಗ್ರಾಮಸ್ಥರು ರೈತರಿಗೆ, ಉಪ ನೊಂದಣಿ, ಸೇರಿದಂತೆ ಹಲವಾರು ಸಮಸ್ಯೆಗಳು ಎದುರಿಸುವಂತಾಗಿದೆ. ಈಗಾಗಲೇ ಕಳೆದ 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲಿಸುವ ಮೂಲಕ ತಾಲೂಕಿನ ಮತದಾರರು ಶಿವನಗೌಡ ನಾಯಕರಿಗೆ ತಕ್ಕ ಪಾಠ ಕಲಿಸಿದ್ದಾರೆ. ಆದಷ್ಟು ಬೇಗ ಅರಕೇರಾ ತಾಲೂಕು ಕೇಂದ್ರವನ್ನು ರದ್ದು ಮಾಡಿ, ಗಬ್ಬೂರ ತಾಲೂಕು ಕೇಂದ್ರವನ್ನಾಗಿ ಮಾಡಬೇಕು ಎಂದು ಜಿಲ್ಲಾಡಳಿತ ಹಾಗೂ ಸರಕಾರಕ್ಕೆ ಪತ್ರಿಕಾಗೋಷ್ಠಿಯ ಮೂಲಕ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾಜಿ ತಾಪಂ ಸದಸ್ಯ ಗೋವಿಂದರಾಯ, ಮರಲಿಂಗಪ್ಪ ಕೂಳ್ಳೂರು, ಆಂಜನೇಯ ಬಡಿಗೇರಾ, ಮಂಜುನಾಥ್ ಹೇರುಂಡಿ, ಸೇರಿದಂತೆ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News