ಕರ್ತವ್ಯಲೋಪ, ಹಣ ದುರ್ಬಳಕೆ ಆರೋಪದಡಿ ಲಿಂಗಸುಗೂರು ಪುರಸಭೆಯ ಮುಖ್ಯಾಧಿಕಾರಿ ಅಮಾನತು

Update: 2025-03-25 12:31 IST
Photo of Reddy Rayanagowda

ರೆಡ್ಡಿ ರಾಯನಗೌಡ

  • whatsapp icon

ಲಿಂಗಸುಗೂರು : ಕರ್ತವ್ಯ ಲೋಪ ಹಾಗೂ ಹಣ ದುರ್ಬಳಕೆ ಆರೋಪದಡಿಯಲ್ಲಿ ಪುರಸಭೆಯ ಮುಖ್ಯಾಧಿಕಾರಿ ರೆಡ್ಡಿರಾಯನಗೌಡ ಅವರನ್ನು ಜಿಲ್ಲಾಧಿಕಾರಿಗಳು ಅಮಾನತುಗೊಳಿಸಿ ಸೋಮವಾರ ಆದೇಶ ಹೊರಡಿಸಿದ್ದಾರೆ.

ಅಮಾನತುಗೊಂಡ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ಅವರು ಹಿರಿಯ ಆರೋಗ್ಯ ನಿರೀಕ್ಷಕರಾಗಿದ್ದು, ಈ ಹಿಂದೆ ಮಸ್ಕಿ ಪುರಸಭೆಯ ಮುಖ್ಯಾಧಿಕಾರಿಕಾರಿಯಾಗಿದ್ದರು. ಹಾಲಿ ಲಿಂಗಸುಗೂರು ಪುರಸಭೆಯ ಮುಖ್ಯಾಧಿಕಾರಿಗಳಾಗಿದ್ದ ರೆಡ್ಡಿ ರಾಯನಗೌಡ ಅವರು, ಮಸ್ಕಿ ಪುರಸಭೆ ಕಾರ್ಯಾಲಯಕ್ಕೆ ಪೀಠೋಪಕರಣಗಳ ಅಳವಡಿಕೆಗಾಗಿ  57.64 ಲಕ್ಷ ರೂ. ಮೊತ್ತದ ಕಾಮಗಾರಿ ನಿರ್ವಹಣೆಯಲ್ಲಿ ಸರ್ಕಾರದ ನಿಯಮಗಳ ಪಾಲನೆ ಮಾಡದೇ ಕರ್ತವ್ಯಲೋಪ ಹಾಗೂ ಪೀಠೋಪಕರಣಗಳ ಪುರಸಭೆಗೆ ಹಸ್ತಾಂತರ ಹಣ ಪಾವತಿಸಿರುವುದು ಹಾಗೂ ಸರ್ಕಾರದ ಹಣ ದುರ್ಬಳಕೆಗಳ ಆರೋಪದಡಿಯಲ್ಲಿ ಅಮಾನತುಗೊಳಿಸಲಾಗಿದೆ ಎಂದು ವಿವರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News