ರಾಯಚೂರು | ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ರಾಯಚೂರು : ಸ್ಥಳೀಯ ಅಜಾದ ನಗರದ ಮಾವಿನ ಕೆರೆ ಗಾರ್ಡನ್ ಬಳಿ ಇರುವ ಕೆ.ಸೂಗಪ್ಪ ಟವರ್ಸ್ ನ ತೃಪ್ತಿ ಡಯಾಕೇರ್ ನಲ್ಲಿ ಶುಕ್ರವಾರ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಏರ್ಪಡಿಸುವ ಮೂಲಕ ವೈದ್ಯರಾದ ಡಾ.ರಾಮಕೃಷ್ಣ ಎಂ.ಆರ್. ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿ ಬಳಗವು ಅರ್ಥಪೂರ್ಣವಾಗಿ ಆಚರಿಸಿತು.
ಹುಟ್ಟುಹಬ್ಬದ ಅಂಗವಾಗಿ ಡಯಾಕೇರ್ ನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ವೈದ್ಯರನ್ನು ಸಡಗರ ಸಂಭ್ರಮದಿಂದ ಅಭಿಮಾನಿಗಳು ಆತ್ಮೀಯವಾಗಿ ಸ್ವಾಗತಿಸಿ ನಂತರ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು. ನಂತರ ಅವರ ಅಭಿಮಾನಿಗಳು, ಹಿತೈಷಿಗಳು ಅಪಾರ ಸಂಖ್ಯೆಯಲ್ಲಿ ಆಗಮಿಸಿ ಡಾ.ರಾಮಕೃಷ್ಣ ದಂಪತಿಗಳಿಗೆ ಬೃಹತ್ ಹಾರವನ್ನು ಹಾಕಿ ಶುಭ ಕೋರಿದಲ್ಲದೆ ಅನೇಕರು ವೈಯಕ್ತಿಕವಾಗಿ ಹುಗುಚ್ಛ ನೀಡುವುದರ ಮೂಲಕ ಜನ್ಮದಿನದ ಸಂಭ್ರಮದಲ್ಲಿ ಪಾಲ್ಗೊಂಡರು.
ಇದೇ ಸಂದರ್ಭದಲ್ಲಿ 75 ಕ್ಕೂ ಹೆಚ್ಚು ಅವರ ಅಭಿಮಾನಿಗಳು ಸ್ವಯಂ ಪ್ರೇರಿತ ರಕ್ತದಾನ ಮಾಡಿದರು. ರಕ್ತದಾನ ಶಿಬಿರವನ್ನು ಭಾರತೀಯ ವೈದ್ಯಕೀಯ ಸಂಘದ ರಕ್ತ ಭಂಡಾರದವರು ಸಹಯೋಗ ನೀಡಿದರು.
ಈ ಸಂದರ್ಭದಲ್ಲಿ ವೈದ್ಯರಾದ ರಾಮಕೃಷ್ಣ ಎಂ.ಆರ್. ಅವರ ಧರ್ಮಪತ್ನಿ ತೃಪ್ತಿ ಐಎಂಎ ರಕ್ತಭಂಡಾರದ ವೈದ್ಯಾಧಿಕಾರಿ ಡಾ. ಮಲ್ಲಿಕಾ ಬಿರಾದಾರ, ರಂಜಿತ್ ದಂಡೋರ, ಜೇಮ್ಸ್ ಮಂಜರ್ಲಾ, ಸೂರಿ, ಆಂಜನೇಯ ಗುಂಜಳ್ಳಿ,ವೀರೇಶ ಗೋನಾಳ, ಭೀಮೇಶ ತುಂಟಾಪೂರ, ಜಕ್ರಪ್ಪ ಹಂಚಿನಾಳ ವಿಜಯ ದಿನ್ನಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳ ಬಳಗ ಭಾಗವಹಿಸಿತ್ತು.