ಲಿಂಗಸುಗೂರು: ಬಿಸಿಲಿನಿಂದ ಹೈರಾಣಾದ ಜನರಿಗೆ ತಂಪೆರದ ಮಳೆ
Update: 2025-03-22 08:57 IST

PC: freepik
ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಪಟ್ಟಣದಲ್ಲಿ ಶುಕ್ರವಾರ ಸುಮಾರು ಅರ್ಧಗಂಟೆಗಳ ಕಾಲ ಅಕಾಲಿಕ ಆಲಿಕಲ್ಲು ಸಹಿತ ಮಳೆ ಸುರಿದಿದೆ.
ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ 42 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪಮಾನ ದಾಖಲಾಗಿದ್ದು ಜನರನ್ನು ಹೈರಾಣು ಮಾಡಿದ್ದು, ಈ ಮಧ್ಯ ಶುಕ್ರವಾರ ಹಟ್ಟಿ ಯಲ್ಲಿ ಮಳೆ ಬಂದು ತಂಪೆರೆದಿದೆ.
ಮಳೆಯ ಮಧ್ಯೆ ಬಿದ್ದ ಆಲಿಕಲ್ಲುಗಳನ್ನು ಕಂಡು ಜನರು ಕೈಯಲ್ಲಿ ಹಿಡಿದುಕೊಂಡು ಸಂತಸ ಪಟ್ಟರು. ಹೊಸ ಬಸ್ ನಿಲ್ದಾಣದ ಹತ್ತಿರ ಇರುವ ಧಾರುವಾಲ ಕ್ರೀಡಾಗಣ ಮಳೆಯಿಂದ ಅರ್ಧ ತುಂಬಿಕೊಂಡಿತು.
ಗುರುಗುಂಟಾ, ಹೆಜ್ಜಲಗಟ್ಟಾ ಗ್ರಾಮದಲ್ಲಿ ಅಲ್ಪ ಪ್ರಮಾಣದ ಮಳೆ ಸುರಿದಿದೆ.