ರಾಯಚೂರು | ಟ್ರ್ಯಾಕ್ಟರ್ ಪಲ್ಟಿ ; ಚಾಲಕನಿಗೆ ಗಾಯ
Update: 2025-03-20 17:19 IST

ರಾಯಚೂರು : ತಾಲೂಕಿನ ಕಲ್ಮಲಾ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಹತ್ತಿ ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಘಟನೆಯಿಂದ ಸ್ವಲ್ಪದರಲ್ಲಿಯೇ ಚಾಲಕನ ಜೀವ ಉಳಿದಿದೆ. ಲಾರಿ ಚಾಲಕ ವೇಗವಾಗಿ ಹೋಗುವ ಭರದಲ್ಲಿ ಟ್ರ್ಯಾಕ್ಟರ್ ಗೆ ಗುದ್ದಿ ಪರಾರಿಯಾಗಿದ್ದಾನೆ. ಗುದ್ದಿದ ರಭಸಕ್ಕೆ ಟ್ರ್ಯಾಕ್ಟರ್ ಚೆಸ್ಸಿ ಕಟ್ ಆಗಿದೆ. ಲಾರಿ ಚಾಲಕನ ನಿರ್ಲಕ್ಷ್ಯಕ್ಕೆ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಟ್ರ್ಯಾಕ್ಟರ್ ಹತ್ತಿ ಹೊತ್ತು ಮಾರುಕಟ್ಟೆಗೆ ತೆಗೆದೊಯ್ಯುವಾಗ ಘಟನೆ ಸಂಭವಿಸಿದ್ದು, ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.