ರಾಯಚೂರು | ಟ್ರ್ಯಾಕ್ಟರ್-ಬೊಲೆರೊ ಢಿಕ್ಕಿ; ಐವರು ಮಹಿಳೆಯರಿಗೆ ಗಾಯ
Update: 2025-03-20 19:49 IST

ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಹೋಬಳಿಯ ಮುರಾನಪುರ ಬಸ್ ನಿಲ್ದಾಣದ ಬಳಿ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಬೊಲೆರೋ ವಾಹನಕ್ಕೆ ಢಿಕ್ಕಿಯಾಗಿ ಐದು ಮಹಿಳೆಯರು ಗಾಯಗೊಂಡ ಘಟನೆ ನಡೆದಿದೆ.
ಸಿರವಾರ ತಾಲೂಕಿನ ಕಲ್ಲೂರಿನಿಂದ ಗಬ್ಬೂರಿಗೆ ಮೆಣಸಿನಕಾಯಿ ಕೀಳಲು ಬೊಲೆರೋ ವಾಹನದಲ್ಲಿ ಕೃಷಿ ಕಾರ್ಮಿಕ ಮಹಿಳೆಯರು ಹೋಗುತ್ತಿದ್ದ ವೇಳೆ ಏಕಾಏಕಿ ಟ್ರ್ಯಾಕ್ಟರ್ ಬೊಲೆರೊಗೆ ಢಿಕ್ಕಿಯಾಗಿದೆ ಎನ್ನಲಾಗಿದೆ.
ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಗಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.