ಲಿಂಗಸುಗೂರು: ಆಟೋ- ಕಾರು ಢಿಕ್ಕಿ; ನಾಲ್ವರಿಗೆ ಗಾಯ

Update: 2025-02-08 09:15 IST
ಲಿಂಗಸುಗೂರು: ಆಟೋ- ಕಾರು ಢಿಕ್ಕಿ; ನಾಲ್ವರಿಗೆ ಗಾಯ
  • whatsapp icon

ರಾಯಚೂರು:  ಆಟೋ- ಕಾರು ನಡುವೆ ಢಿಕ್ಕಿ ಸಂಭವಿಸಿ ಆಟೋ ಪಲ್ಟಿಯಾಗಿ ನಾಲ್ವರು ಮಹಿಳೆಯರು ಗಾಯಗೊಂಡ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಆಶಿಹಾಳ ಗ್ರಾಮದ ಬಸವಣ್ಣ ದೇವಸ್ಥಾನದ ಬಳಿ ಶುಕ್ರವಾರ ನಡೆದಿದೆ.

ಗಾಯಗೊಂಡವರನ್ನು ಅಂಕನಾಳ ಗ್ರಾಮದ ಬಸ್ಸಮ್ಮ ಜುಮ್ಮನ ಗೌಡ(50), ಕಮಲದಿನ್ನಿ ಗ್ರಾಮದ ದ್ಯಾಮಮ್ಮ ಮುದ್ದಮ್ಮ(45), ಹುಲಿ ಹೈದರ್ ಗ್ರಾಮದ ಕನಮಮ್ಮ(35), ಅಮದಿಹಾಳ ಗ್ರಾಮದ ಸಂಗಮ್ಮ ( 65) ಎಂದು ಗುರುತಿಸಲಾಗಿದೆ.

ಗಾಯಗೊಂಡವರನ್ನು ಲಿಂಗಸುಗೂರಿನ‌ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು‌, ತೀವ್ರಗಾಯಗೊಂಡ ಬಸ್ಸಮ್ಮ ಹಾಗೂ ದ್ಯಾಮಮ್ಮ ಅವರನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಮುದಗಲ್ ನಿಂದ ನಾಗರಾಳಗೆ ಹೋಗುತ್ತಿದ್ದ ಆಟೋಗೆ ಎದುರಿಗೆ ಬರುತ್ತಿದ್ದ ಕಾರು ಢಿಕ್ಕಿ ಹೊಡೆದ ಪರಿಣಾಮ ಆಟೋ ಪಲ್ಟಿಯಾಗಿದೆ. ಆಟೋ ಚಾಲಕನನ್ನು ಪೊಲೀಸರು  ವಶಕ್ಕೆ ಪಡೆದಿದ್ದು, ಮುದಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್‌ ಮಾಡಿ ►https://whatsapp.com/channel/0029VaA8ju86LwHn9OQpEq28


Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News