ರಾಯಚೂರು | ಗ್ರಾಮೀಣ ಪ್ರದೇಶದಲ್ಲಿ ಜಿಪಂ ಸಿಇಒ ಸಂಚಾರ; ಕಾಮಗಾರಿಗಳ ಪ್ರಗತಿ ಪರಿಶೀಲನೆ
ರಾಯಚೂರು| ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ ಅವರು ಇಂದು ಗ್ರಾಮೀಣ ಭಾಗದಲ್ಲಿ ಪ್ರವಾಸ ಕೈಗೊಂಡು ನಾನಾ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು.
ಲಿಂಗಸುಗೂರು ತಾಲೂಕಿನಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಅನುಷ್ಠಾನಗೊಳಿಸುತ್ತಿರುವ ಡಿಬಿಟಿಎಮ್‌ವಿಎಸ್ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿಗಳ ಭೌತಿಕ ಪ್ರಗತಿಯನ್ನು ನಾರಾಯಣಪುರ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಜಲಜೀವನ್ ಮಿಷನ್ ಯೋಜನೆಯಡಿ ನಾರಾಯಣಪುರ ಜಲಾಶಯದ ಹಿನ್ನೀರಿನ ಭಾಗದಲ್ಲಿ ಇನ್‌ಟೆಕ್ ಕಂ ಜಾಕ್‌ವೆಲ್ ಹೆಡ್‌ವರ್ಕ್ ಸಂಪರ್ಕ ಸೇತುವೆ ವೀಕ್ಷಿಸಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಗುಣಮಟ್ಟದೊಂದಿಗೆ ಪೂರ್ಣಗೊಳಿಸಲು ಸೂಚಿಸಿದರು.
ಚಿತ್ತಾಪೂರ ಗ್ರಾಮದ ನಾರಾಯಣಪೂರ ಜಲಾಶಯದ ವ್ಯಾಪ್ತಿಯಲ್ಲಿ ಕೈಗೊಂಡಿರುವ 160 ಎಂಎಲ್ಡಿ ನೀರು ಸಂಸ್ಕರಣಾ ಘಟಕದ ಏರೇಟರ್, ಕ್ಲಾರಿಫ್ಲೋಕ್ಯುಲೇಟರ್, ಶೋಧನೆ, ಕ್ಲೋರಿನೇಷನ್ 16 ಶೋಧನೆ ಹಾಸಿಗೆ ಪೂರ್ಣಗೊಳಿಸಿರುವುದನ್ನು ಹಾಗೂ ನಿರ್ಮಾಣದ ವಿವಿಧ ಹಂತಗಳಲ್ಲಿರುವ ವಿವಿಧ ಘಟಕಗಳ ಕಾಮಗಾರಿಗಳನ್ನು ಪರಿಶೀಲಿಸಿದರು.
ನಂತರ ನಾಗರಾಳ ಹಾಗೂ ನರಕಲದಿನ್ನಿ ಮಾರ್ಗದಲ್ಲಿ ಕೈಗೊಂಡ ಎಂಎಸ್ ಪೈಪಲೈನ್ ಅಳವಡಿಕೆ ಕಾಮಗಾರಿ ಹಾಗೂ ಈ ಯೋಜನೆಯಡಿ ಕಾನಾಪುರ ಹಟ್ಟಿ ಗ್ರಾಮದಲ್ಲಿ ನಿರ್ಮಾಣ ಮಾಡಲಾದ ಪ್ರಿಕಾಸ್ಟ್ ಮೇಲ್ಮಟ್ಟದ ಜಲಾಗಾರದ ಕಾಮಗಾರಿಗಳನ್ನು ಪರಿಶೀಲಿಸಿದರು.
ಇದೆ ವೇಳೆ ಮುದಗಲ್ ಗ್ರಾಮದ ಹತ್ತಿರದ ಗುತ್ತಿಗೆದಾರರ ಕ್ಯಾಂಪಗೆ ಭೇಟಿ ನೀಡಿದರು. ಈ ಕ್ಯಾಂಪ್‌ನಲ್ಲಿ ಯೋಜನೆಗೆ ಅವಶ್ಯಕವಿರುವ ಪ್ರಿಕಾಸ್ಟ್ ಟ್ಯಾಂಕ್ ಕಾಸ್ಟಿಂಗ್ ಕಾಮಗಾರಿಯನ್ನು ಪರಿಶೀಲಿಸಿದರು.
ನಂತರ ಮುದಗಲ್ ಕ್ಯಾಂಪಿನಲ್ಲಿ ಎಸ್‌ಎನ್ಸಿವಿಇಐಪಿಎಲ್-ಎಸ್ಪಿಎಂಎಲ್-ಜೆವಿ ಪ್ರಾಜೆಕ್ಟ್ ನ ತಾಂತ್ರಿಕ ಅಧಿಕಾರಿಗಳೊಂದಿಗೆ ಯೋಜನೆಯ ಭೌತಿಕ ಪ್ರಗತಿ ಹಾಗೂ ಅನುಷ್ಠಾನದ ಬಗ್ಗೆ ಸಂಬಂಧಿಸಿದವರು ಪ್ರಾತ್ಯಕ್ಷಿತೆ ಮೂಲಕ ಮಾಹಿತಿ ನೀಡಿದರು.
ತಾಂತ್ರಿಕ ಬೆಂಬಲ ಹಾಗೂ ಗುಣಮಟ್ಟ ನಿಯಂತ್ರಣ ಏಜೆನ್ಸಿ ಪಿ.ಎಮ್.ಸಿ., ಇ.ಜಿ.ಐ.ಎಸ್. ಇಂಡಿಯಾ ಕನ್ಸಲ್ಟಿಂಗ್ ಇಂಜಿನಿಯರ್ಸ್ ಪ್ರೈವೆಟ್ ಲಿಮಿಟೆಡ್ ರಿಂದ ಮಾಹಿತಿ ಪಡೆದುಕೊಂಡರು.
ಪಿಎಸಿ, ಇಜಿಐಎಸ್ ಇಂಡಿಯಾ ಕನ್ಸಲ್ಟಿಂಗ್ ಎಂಜಿನಿಯರ್ಸ್ ಪ್ರೈವೇಟ್ ಲಿಮಿಟೆಡ್ ಹೆಡ್ವರ್ಕ್ ನಲ್ಲಿ ಜ್ಯಾಕ್ವೆಲ್ ಕಮ್ ಪಂಪ್‌ಹೌಸ್ ಎಲ್ಲ 22 ಪೈಲಿಂಗ್ ಕಾಮಗಾರಿಗಳನ್ನು ಫೂರ್ಣಗೊಳಿಸಿರುವುದನ್ನು ಪರಿವೀಕ್ಷಿಸಿದರು.
ಸಂಪರ್ಕ ಸೇತುವೆ ಪ್ರಗತಿ, ಡಬ್ಲೂಟಿಪಿ ಅಡಿ ವಿವಿಧ ರಚನಾತ್ಮಕ ಘಟಕಗಳ ನಿರ್ಮಾಣದ ವಿವಿಧ ಹಂತಗಳ ಪ್ರಗತಿ, ಪೈಪ್‌ಲೈನ್ ಸೇರಿದಂತೆ ನಾನಾ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು. ಪ್ರಗತಿ ಹಂತದಲ್ಲಿರುವ ಬಾಕಿ ವಿವಿಧ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಶೀಘ್ರವಾಗಿ ಫೂಣಗೊಳಿಸಲು ಇದೆ ವೇಖೆ ಸಿಇಓ ಅವರು ಸೂಚನೆ ನೀಡಿದರು.