ರಾಯಚೂರು | ಭೀಮಾ ಕೋರೆಗಾಂವ್ ವಿಜಯೋತ್ಸವ ದಿನಾಚರಣೆ

Update: 2025-01-01 13:06 GMT

ರಾಯಚೂರು : 207ನೇ ಭೀಮಾ ಕೋರೆಗಾಂವ್ ವಿಜಯೋತ್ಸವದ ಅಂಗವಾಗಿ ನಗರದ ರಾಮಲಿಂಗೇಶ್ವರ ದೇವಸ್ಥಾನದಿಂದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದವರೆಗೆ ವಿಜಯಸ್ಥಂಬದ ಮೆರವಣಿಗೆ ನಡೆಯಿತು.

ಬುದ್ಧ ಹಾಗೂ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮೆರವಣಿಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಛಲವಾದಿ ಮಹಾಸಭಾ ರಾಜ್ಯ ನಿರ್ದೇಶಕ ಎಂ.ವಸಂತ ಅವರು ಚಾಲನೆ ನೀಡಿದರು.

ಈ ವೇಳೆ ವಸಂತಕುಮಾರ ಮಾತನಾಡಿ, ಕೋರೆಗಾಂವ್ ಕದನ ಭಾರತದ ಇತಿಹಾಸದಲ್ಲೇ ಮಹತ್ವದ ಸ್ಥಾನ ಪಡೆದಿದೆ. 500 ಮಂದಿ ಮಹಾರ್ ಹೋರಾಟಗಾರರು ಆಹಾರ, ನೀರು ಹಾಗೂ ವಿಶ್ರಾಂತಿವಿಲ್ಲದೆ 28 ಸಾವಿರ ಪೇಶ್ವೆಗಳ ಸೈನ್ಯದ ವಿರುದ್ಧ ನಿರಂತರ 12 ಗಂಟೆ ಹೋರಾಟ ನಡೆಸಿ ವಿಜಯ ಸಾಧಿಸಿದ್ದನ್ನು ಸ್ಮರಣಾರ್ಥ ವಿಜಯೋತ್ಸವ ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈ ವೇಳೆ ಛಲವಾದಿ ಸಮಾಜದ ಮುಖಂಡರಾದ ವೀರೇಶ ಗಾಣಧಾಳ್, ಹನುಮಂತಪ್ಪ ವಕೀಲ, ವಿಶ್ವನಾಥ್ ಪಟ್ಟಿ, ಭರತ್, ತಮ್ಮಣ್ಣ, ಎಂ.ಮಾರೆಪ್ಪ, ಯಲ್ಲಪ್ಪ, ಚಿನ್ನಿರಾಯುಡು, ರಮೇಶ, ಅಂಜನರೆಡ್ಡಿ, ಮಹೇಶ, ವಿಜಯ ಪ್ರಸಾದ್ ಪಾಲ್ಗೊಂಡಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News