ಬಿಚ್ಚಾಲಿ ಗ್ರಾಮದ ಕುಡಿಯುವ ನೀರಿನ ಶುದ್ಧೀಕರಣ ಘಟಕದಲ್ಲಿ ಸತ್ತು ಬಿದ್ದ ನಾಯಿ ಪತ್ತೆ

Update: 2025-01-03 08:59 GMT

ರಾಯಚೂರು: ಕುಡಿಯುವ ನೀರಿನ ಶುದ್ಧೀಕರಣ ಘಟಕದಲ್ಲಿ ಸತ್ತು ಬಿದ್ದ ನಾಯಿಯ ಶವವೊಂದು ಪತ್ತೆಯಾಗಿರುವ ಘಟನೆ ರಾಯಚೂರು ತಾಲೂಕಿನ ಬಿಚ್ಚಾಲಿ ಗ್ರಾಮದಲ್ಲಿ ನಡೆದಿದೆ.

ನಾಯಿ ಸತ್ತು ಬಿದ್ದ ನೀರನ್ನು ಕುಡಿದ ಜನರಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಇದೇ ನೀರನ್ನು ಕುಡಿದಿರುವ 17 ಗ್ರಾಮಗಳ ಜನರು ಇದೀಗ ಆತಂಕಕ್ಕೆ ಒಳಗಾಗಿದ್ದಾರೆ.

ನೀರಿನ ವಾಸನೆಯಿಂದ ಘಟನೆ ಬೆಳಕಿಗೆ ಬಂದಿದ್ದು, ಗ್ರಾಮಸ್ಥರು ಕುಡಿಯುವ ನೀರಿನ ಶುದ್ಧೀಕರಣ ಘಟಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಅದರಲ್ಲಿ ಸತ್ತು ಬಿದ್ದ ನಾಯಿಯ ಶವ ಪತ್ತೆಯಾಗಿದೆ.

ಗ್ರಾಮದ ಮನೆ ಮನೆಗೆ ಸರಬರಾಜು ಮಾಡುತ್ತಿದ್ದ ನೀರು ಗಬ್ಬು ನಾರುತ್ತಿದ್ದು, ಕಳೆದ 4 ದಿನ ಹಿಂದೆ ನಾಯಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.

ಗ್ರಾಮಸ್ಥರು 4 ದಿನಗಳಿಂದ ಇದೇ ನೀರನ್ನೇ ಕುಡಿದಿದ್ದು, ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News