ರಾಯಚೂರು | ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿ : ಡಾ.ಟಿ.ರೋಣಿ

Update: 2025-01-04 14:40 GMT

ರಾಯಚೂರು : ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಇಲಾಖೆಗಳಿಂದ ಸಿಗುವ ಸೌಲಭ್ಯಗಳನ್ನು ಸ್ವ-ಸಹಾಯ ಗುಂಪಿನ ಮಹಿಳೆಯರಿಗೆ ದೊರಕುವಂತೆ ಮಾಡಿ, ಅವರ ಸರ್ವಾಂಗೀಣ ಅಭಿವೃದ್ಧಿಗೆ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಅಧ್ಯಕ್ಷರು ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ ಅವರು ಹೇಳಿದರು.

ನಗರದ ಯರಮರಸ್ ರಸ್ತೆಯಲ್ಲಿರುವ ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರದಲ್ಲಿ ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಜಿಲ್ಲಾ ಪಂಚಾಯತ್ ರಾಯಚೂರು ಸಹಯೋಗದಲ್ಲಿ ಜ.04ರ ಶನಿವಾರ ಹಮ್ಮಿಕೊಂಡಿದ್ದ ಜಿ.ಎಫ್.ಎಲ್.ಎಫ್ ಅಧ್ಯಕ್ಷರುಗಳಿಗೆ ಮೂರು ದಿನಗಳ ಪರಿವರ್ತನೆ ಹೆಜ್ಜೆ ಸಾಮರ್ಥ್ಯಭಿವೃದ್ಧಿ ತರಬೇತಿಯ ಕಾರ್ಯಗಾರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತಾನಾಡಿದರು.

ಪ್ರಸ್ತುತ ತರಬೇತಿಯು ಆಯ್ದ ಮಾದರಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳ ಕಾರ್ಯಕಾರಿ ಸಮಿತಿ ಹಾಗೂ ಪದಾಧಿಕಾರಿಗಳನ್ನು ಕೇಂದ್ರಿಕರಿಸಿ ಒಕ್ಕೂಟದ ಪರಿಕಲ್ಪನೆ ಮತ್ತು ರಚನೆ, ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಕಾರ್ಯಕಾರಿ ಸಮಿತಿ ಹಾಗೂ ಪದಾಧಿಕಾರಿಗಳ ಕಾರ್ಯವಿಧಾನ, ಅಧ್ಯಕ್ಷರ ಪಾತ್ರ ಮತ್ತು ಜವಾಬ್ದಾರಿಗಳ ಕುರಿತಂತೆ ಒಕ್ಕೂಟದ ಸದಸ್ಯರನ್ನು ಸಿದ್ದಗೊಳಿಸಲು ತನ್ಮೂಲಕ ಒಕ್ಕೂಟಗಳು ಸುಸ್ಥಿರ ಸಮುದಾಯ ಆಧಾರಿತ ಸಂಸ್ಥೆಯಾಗಿ ಬೆಳವಣಿಗೆ ಹೊಂದಲು ಅನುಕೂಲವಾಗುವಂತೆ ಮೂರು ದಿನಗಳ ವಸತಿ ಸಹಿತ ಬಲವರ್ದನೆ ತರಬೇತಿಯನ್ನು ಅಯೋಜಿಸಲಾಗಿದೆ ಎಂದರು.

ಈ ವೇಳೆ ಗ್ರಾಮ ಪಂಚಾಯತ್ ಮಟ್ಟದ ಅಧ್ಯಕ್ಷರುಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿ ಶಿವು ಕುಮಾರ್, ಎನ್.ಆರ್.ಎಲ್.ಎಮ್. ಜಿಲ್ಲಾ ವ್ಯವಸ್ಥಾಪಕ ವಿಜಯ ಕುಮಾರ್, ಎಸ್.ಐ.ಆರ್.ಡಿ. ಜಿಲ್ಲಾ ತರಬೇತಿ ಸಂಯೋಜಕರಾದ ಬೆಟ್ಟಣ್ಣ ಗೌಡ, ಆಡಳಿತ ಸಹಾಯಕರಾದ ಸೈಯದ್ ತಹೀರ್ ಪಾಷ್, ಸುನೀತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News