ರಾಯಚೂರು: ಮನೆಯ ಮುಂದೆ ನಿಲ್ಲಿಸಿದ ಆಟೋಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು; ಹೊತ್ತಿ ಉರಿದ ಆಟೋ
ರಾಯಚೂರು| ಇಲ್ಲಿನ ಎಲ್. ಬಿ. ಎಸ್. ನಗರ ಕಮಿಟಿ ಹಾಲ್ ಹತ್ತಿರ ನಿಲ್ಲಿಸಿದ ಆಟೋ ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಸೋಮವಾರ ಬೆಳಗಿನ ಜಾವ ನಡೆದಿದೆ.
ಚಾಲಕ ನಾಗರಾಜ್ ಯಾನೆ ದುಬ್ಬ ನಾಗರಾಜ್ ಅವರಿಗೆ ಸೇರಿದ ಆಟೋಗೆ ಬೆಂಕಿ ಹಚ್ಚಿದ್ದಾರೆ.
ಆಟೋ ಮಾಲೀಕ ನಾಗರಾಜ ಖಾಸಗಿ ಕೆಲಸದ ನಿಮಿತ್ತ ಪುಣೆಗೆ ಹೋಗಿದ್ದರು ಎನ್ನಲಾಗಿದ್ದು, ಹೀಗಾಗಿ ಮನೆಯ ಸ್ವಲ್ಪ ದೂರದ ತಾಯಿ ವಾಸವಾಗಿರುವ ಕಮಿಟಿ ಹಾಲ್ ಬಳಿ ಆಟೋ ನಿಲ್ಲಿಸಿದ್ದರು.
ಬೆಳಿಗಿನ ಜಾವ 3.30 ಗಂಟೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು ಹೊತ್ತಿ ಉರಿಯುವ ವೇಳೆ ಸ್ಥಳೀಯರು ನಾಗರಾಜ ಅವರ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಬೆಂಕಿ ನಂದಿಸುವ ಮೊದಲೇ ಆಟೋ ಟಾಪ್, ಸೀಟ್, ಗ್ಲಾಸ್ ಸೇರಿ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಕಣ್ಣಮುಂದೆಯೇ ಆಟೋ ಬೆಂಕಿಯಲ್ಲಿ ಹೊತ್ತಿ ಉರಿದಿದೆ.
ಪುಣೆಯಿಂದ ಬೆಳಿಗ್ಗೆ ವಾಪಸ್ಸಾದ ಆಟೋ ಮಾಲೀಕ ನಾಗರಾಜ ಸ್ಥಳೀಯ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದರು.