ರಾಯಚೂರು | ಮಾವಿನ ಕೆರೆ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದ ಸಚಿವ ಎನ್.ಎಸ್.ಬೋಸರಾಜು

Update: 2025-01-06 11:46 GMT

ರಾಯಚೂರು : ಜಿಲ್ಲಾಡಳಿತ ರಾಯಚೂರು, ಸಣ್ಣ ನೀರಾವರಿ ಇಲಾಖೆ ಸಂಯೋಜನೆಯೊಂದಿಗೆ 700 ವರ್ಷಗಳ ರಾಯಚೂರಿನ ಐತಿಹಾಸಿಕ ಮಾವಿನ ಕೆರೆಯ ಅಭಿವೃದ್ಧಿ ಕಾಮಗಾರಿಯನ್ನು ಜಿಲ್ಲಾಧಿಕಾರಿ ನಿತೀಶ್ ಕೆ., ಸಹಾಯಕ ಆಯುಕ್ತರಾದ ಗಜಾನನ ಬಾಳೆ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್.ಎಸ್.ಬೋಸರಾಜು ಅವರು ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು.

ನಗರದ ನಾಗರಿಕರಿಗೆ ವಾಯುವಿಹಾರ ಜೊತೆಗೆ ಪ್ರೇಕ್ಷಣೀಯ ಸ್ಥಳವನ್ನಾಗಿ ಮಾಡುತ್ತಿರುವ ಕಾಮಗಾರಿಯನ್ನು ಪರಿಶೀಲಿಸಿ ಮಾತನಾಡಿದರು.

ಸ್ವಚ್ಚ ಮತ್ತು ಸುಂದರ ನಗರ ಹಾಗೂ ಅಂತರ್ಜಲ ವೃದ್ಧಿಗಾಗಿ ರಾಯಚೂರಿನ ಹೃದಯ ಭಾಗದಲ್ಲಿರುವ ಐತಿಹಾಸಿಕ ಮಾವಿನ ಕೆರೆ ಅಭಿವೃದ್ಧಿಗೊಳಿಸಲಾಗುತ್ತಿದೆ. ಈ ಐತಿಹಾಸಿಕ ಮಾವಿನ ಕೆರೆ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಮಾವಿನ ಕೆರೆ ಸಮಗ್ರ ಅಭಿವೃದ್ಧಿಗೆ ಎಲ್ಲರು ಕೈಜೋಡಿಸಿ ಸಹಕರಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಗುರುಸಿದ್ದಯ್ಯ ಹಿರೇಮಠ, ಮುಖಂಡರಾದ ಮೊಹ್ಮದ್ ಶಾಲಂ, ಹಿರಿಯರಾದ ಜಯಣ್ಣ, ಕೆ.ಶಾಂತಪ್ಪ, ಶಿವಮೂರ್ತಿ, ಶ್ರೀನಿವಾಸ ರೆಡ್ಡಿ, ಮಹಾನಗರ ಪಾಲಿಕೆಯ ವಲಯ ಆಯುಕ್ತರಾದ ಮೊಹ್ಮದ್ ಜಿಲಾನಿ, ನಗರಸಭೆ ಅಧ್ಯಕ್ಷರಾದ ನರಸಮ್ಮ ನರಸಿಂಹಲು ಮಾಡಗಿರಿ, ಸದಸ್ಯರಾದ ಬಿ ರಮೇಶ, ಶ್ರೀನಿವಾಸ ರಡ್ಡಿ, ಉಪಾಧ್ಯಕ್ಷರಾದ ಸಾಹಜಿದ್ ಸಮೀರ್, ಹರಿಬಾಬು ರಾಂಪೂರು, ನರಸಿಂಹಲು ಮಾಡಿಗಿರಿ, ನೀರಾವರಿ ಇಲಾಖೆಯ ಲೋಕೆಶ್, ಎಡಿಎಲ್ ಆರ್, ಡಿಡಿಎಲ್ ಆರ್.ಭೀಮರಾಯ್ ಸೇರಿದಂತೆ ಅನೇಕರು ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News